ADVERTISEMENT

26/11ರ ಮುಂಬೈ ಭಯೋತ್ಪಾದನಾ ದಾಳಿಕೋರರಿಗೆ ತ್ವರಿತವಾಗಿ ಶಿಕ್ಷೆಯಾಗಲಿ: ಬ್ಲಿಂಕೆನ್

ಪಿಟಿಐ
Published 27 ನವೆಂಬರ್ 2021, 10:11 IST
Last Updated 27 ನವೆಂಬರ್ 2021, 10:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: 2008ರ ನವೆಂಬರ್‌ 11ರಂದು ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆಸಿದವರ ವಿರುದ್ಧದ ವಿಚಾರಣೆಯನ್ನು ತ್ವರಿತಗೊಳಿಸಿ, ಅವರಿಗೆ ಶಿಕ್ಷೆ ವಿಧಿಸಬೇಕು ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್‌ ಒತ್ತಾಯಿಸಿದರು.

ಮುಂಬೈ ಮೇಲಿನ ದಾಳಿಗೆ 13ನೇ ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಈ ಭೀಕರ ದಾಳಿಯ ಆಘಾತದಿಂದ ಪುಟಿದೆದ್ದ ಮುಂಬೈ ನಿವಾಸಿಗಳ ನಡೆಯನ್ನು ಅವರು ಶ್ಲಾಘಿಸಿದರು.

‘ಆರು ಜನ ಅಮೆರಿಕನ್ನರು ಸೇರಿದಂತೆ ಮುಂಬೈ ದಾಳಿಯಲ್ಲಿ ಮೃತಪಟ್ಟವರನ್ನು ನಾವು ಸ್ಮರಿಸಬೇಕು. ಆದರೆ ಅಪರಾಧಿಗಳಿಗೆ ಶಿಕ್ಷೆಯಾಗುವುದು ಬಾಕಿ ಇದೆ’ ಎಂದು ಬ್ಲಿಂಕನ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.