ADVERTISEMENT

ಗಾಜಾ ಸಂಘರ್ಷ: ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸುವಂತೆ ಮ್ಯಾಕ್ರನ್ ಕರೆ

ಏಜೆನ್ಸೀಸ್
Published 6 ಅಕ್ಟೋಬರ್ 2024, 2:13 IST
Last Updated 6 ಅಕ್ಟೋಬರ್ 2024, 2:13 IST
<div class="paragraphs"><p>ಇಮ್ಯಾನುಯೆಲ್ ಮ್ಯಾಕ್ರನ್</p></div>

ಇಮ್ಯಾನುಯೆಲ್ ಮ್ಯಾಕ್ರನ್

   

(ರಾಯಿಟರ್ಸ್ ಚಿತ್ರ)

ಪ್ಯಾರಿಸ್: ಗಾಜಾದಲ್ಲಿ ಸಂಘರ್ಷವನ್ನು ತಡೆಯಲು ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ನಿಲ್ಲಿಸುವಂತೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಕರೆ ನೀಡಿದ್ದಾರೆ.

ADVERTISEMENT

ಲೆಬನಾನ್ ಮೇಲೆ ಭೂ ಕಾರ್ಯಾಚರಣೆಗೆ ಸೇನೆಯನ್ನು ಕಳುಹಿಸುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿರ್ಧಾರವನ್ನು ಮ್ಯಾಕ್ರನ್ ಬಲವಾಗಿ ಖಂಡಿಸಿದ್ದಾರೆ.

'ಗಾಜಾ ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ಕಂಡುಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಾನು ಭಾವಿಸುತ್ತೇನೆ. ಗಾಜಾದಲ್ಲಿ ಸಂಘರ್ಷ ತಡೆಯಲು ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದನ್ನು ನಿಲ್ಲಿಸಬೇಕು' ಎಂದು ಅವರು ಹೇಳಿದ್ದಾರೆ.

'ಫ್ರಾನ್ಸ್ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿಲ್ಲ' ಎಂದು ಮ್ಯಾಕ್ರನ್ ಸ್ಪಷ್ಟಪಡಿಸಿದ್ದಾರೆ.

ಕದನ ವಿರಾಮಕ್ಕೆ ಹಲವು ಬಾರಿ ಕರೆ ನೀಡಿರುವ ಹೊರತಾಗಿಯೂ ಗಾಜಾದಲ್ಲಿ ಸಂಘರ್ಷ ಮುಂದುವರಿಯುತ್ತಿರುವುದಕ್ಕೆ ಮ್ಯಾಕ್ರನ್ ಕಳವಳ ವ್ಯಕ್ತಪಡಿಸಿದ್ದಾರೆ.

'ನಮ್ಮ ಕರೆಯನ್ನು ಕೇಳುತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ಇಸ್ರೇಲ್ ಭದ್ರತೆಯ ಎಡವಟ್ಟು ಕೂಡ ಆಗಿದೆ. ಯುದ್ಧವು ದ್ವೇಷವನ್ನು ಹರಡುತ್ತದೆ' ಎಂದು ಹೇಳಿದ್ದಾರೆ.

ಗಾಜಾ ಹಾಗೂ ಲೆಬನಾನಿನ ಮೇಲೆ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂಬ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. 'ಅವರಿಗೆ ನಾಚಿಕೆಯಾಗಬೇಕು' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.