ADVERTISEMENT

ಪ್ರಧಾನಿ ರಾಜೀನಾಮೆ ಅಂಗೀಕರಿಸಲು ಫ್ರಾನ್ಸ್‌ ಅಧ್ಯಕ್ಷ ನಕಾರ

ದೇಶದಲ್ಲಿ ಅತಂತ್ರ ಚುನಾವಣಾ ಫಲಿತಾಂಶದ ಕಾರಣ

ಏಜೆನ್ಸೀಸ್
Published 8 ಜುಲೈ 2024, 13:51 IST
Last Updated 8 ಜುಲೈ 2024, 13:51 IST
ಎಮ್ಯಾನುಯೆಲ್ ಮ್ಯಾಕ್ರನ್
ಎಮ್ಯಾನುಯೆಲ್ ಮ್ಯಾಕ್ರನ್   

ಪ್ಯಾರಿಸ್‌: ದೇಶದಲ್ಲಿ ಅತಂತ್ರ ಚುನಾವಣಾ ಫಲಿತಾಂಶ ಬಂದಿರುವುದರಿಂದ, ಫ್ರಾನ್ಸ್‌ ಪ್ರಧಾನ ಮಂತ್ರಿ ಗೇಬ್ರಿಯರ್‌ ಅಟ್ಟಲ್‌ ಅವರ ರಾಜೀನಾಮೆಯನ್ನು ಅಂಗೀಕರಿಸಲು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನಿರಾಕರಿಸಿದ್ದಾರೆ.

ದೇಶದ ಸ್ಥಿರತೆಗಾಗಿ ತಾತ್ಕಾಲಿಕವಾಗಿ ಸರ್ಕಾರದ ಮುಖ್ಯಸ್ಥರಾಗಿ ಹುದ್ದೆಯಲ್ಲಿ ಮುಂದುವರೆಯುಂತೆ ಗೇಬ್ರಿಯಲ್‌ ಅವರನ್ನು ಕೇಳಿಕೊಂಡಿದ್ದಾರೆ. 

ಭಾನುವಾರ ಫ್ರಾನ್ಸ್‌ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಆದರೆ ಯಾವುದೇ ಬಣ ಅಥವಾ ಪಕ್ಷ ಸ್ಪಷ್ಟ ಬಹುಮತ ಪಡೆದಿಲ್ಲ. ಈ ಫಲಿತಾಂಶವು ಯುರೋಪಿಯನ್‌ ಒಕ್ಕೂಟಕ್ಕೆ ಆರ್ಥಿಕ ಹಿನ್ನಡೆಯ ಆತಂಕವನ್ನು ಹೆಚ್ಚಿಸಿದೆ. 

ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌ ಆರಂಭವಾಗುವ ಮೂರು ವಾರಗಳ ಮೊದಲು ದೇಶದಲ್ಲಿ ಈ ರೀತಿಯ ಪರಿಸ್ಥಿತಿ ಎದುರಾಗಿದೆ. 

ಅಗತ್ಯವಿದ್ದರೆ ಪ್ರಧಾನಿ ಸ್ಥಾನದಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದ ಗೇಬ್ರಿಯಲ್, ಸೋಮವಾರ ಮುಂಜಾನೆ ರಾಜೀನಾಮೆ ನೀಡಿದರು. 7 ತಿಂಗಳ ಹಿಂದೆ ಅವರು ಪ್ರಧಾನಿಯಾಗಿ ಆಯ್ಕೆಯಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.