ADVERTISEMENT

ಅಮೆರಿಕ ಅಧ್ಯಕ್ಷ ಸ್ಥಾನ: ಕಮಲಾ ಹ್ಯಾರಿಸ್‌ ಪರ ಡೆಮಾಕ್ರಟಿಕ್ ನಾಯಕ ಒಲವು

ಏಜೆನ್ಸೀಸ್
Published 19 ಜುಲೈ 2024, 12:57 IST
Last Updated 19 ಜುಲೈ 2024, 12:57 IST
ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್   

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಂತೆ ಹಾಲಿ ಅಧ್ಯಕ್ಷ ಜೋ ಬೈಡನ್‌ ಅವರ ಮೇಲೆ ಡೆಮಾಕ್ರಟಿಕ್‌ ಪಕ್ಷದ ನಾಯಕರೇ ಒತ್ತಡ ಹೆಚ್ಚುತ್ತಿದ್ದಾರೆ. ಇನ್ನೊಂದೆಡೆ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಲಿ ಎಂದು ಪಕ್ಷದ ಬಹುತೇಕ ನಾಯಕರೇ ಹೇಳುತ್ತಿದ್ದಾರೆ.

ಎಪಿ–ಎನ್‌ಒಆರ್‌ಸಿ ಸೆಂಟರ್‌ ಫಾರ್ ಪಬ್ಲಿಕ್‌ ಅಫೇರ್ಸ್ ರಿಸರ್ಚ್‌ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆ ವೇಳೆ, ಪಕ್ಷದ ನಾಯಕರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

‘ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷರಾದರೆ ಆ ಸ್ಥಾನಕ್ಕೆ ನ್ಯಾಯ ಒದಗಿಸುತ್ತಾರೆ ಎಂದು ಹತ್ತು ಡೆಮಾಕ್ರಟಿಕ್‌ ನಾಯಕರಲ್ಲಿ ಆರು ಜನ ಹೇಳಿದ್ದರೆ, ಹತ್ತು ನಾಯಕರಲ್ಲಿ ಇಬ್ಬರು ಮಾತ್ರ ಈ ಮಾತಿಗೆ ಸಹಮತ ವ್ಯಕ್ತಪಡಿಸಿಲ್ಲ. ಇನ್ನೊಂದೆಡೆ,  ಹತ್ತರಲ್ಲಿ ಇಬ್ಬರು ಮಾತ್ರ ಈ ವಿಷಯವಾಗಿ ಹೇಳುವುದಕ್ಕೆ ತಮ್ಮ ಬಳಿ ಹೆಚ್ಚಿನ ಮಾಹಿತಿ ಇಲ್ಲ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ’ ಎಂದು ಸಮೀಕ್ಷೆ ಹೇಳಿದೆ.

ADVERTISEMENT

‘ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಸ್ಪರ್ಧಿಸಲು ಕಮಲಾ ಹ್ಯಾರಿಸ್‌ ಸಮರ್ಥ ನಾಯಕಿಯಾಗುವರು’ ಎಂದೂ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹೇಳಿದ್ದಾರೆ.

ಒಬಾಮಾ ಎಚ್ಚರಿಕೆ ನಡೆ: ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅಧ್ಯಕ್ಷ ಜೋ ಬೈಡನ್‌ ಅವರ ಮೇಲೆ ಒತ್ತಡ ಹೆಚ್ಚುತ್ತಿರುವ ನಡುವೆಯೇ, ಡೆಮಾಕ್ರಟಿಕ್‌ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದ್ದಾರೆ.

ಪಕ್ಷದ ನಾಯಕರು, ಸಂಸದರ ಅಭಿಪ್ರಾಯಗಳನ್ನು ಆಲಿಸಿರುವ ಒಬಾಮಾ, ‘ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಬೈಡನ್‌ ಮಾತ್ರ ನಿರ್ಧಾರ ಕೈಗೊಳ್ಳಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.