ADVERTISEMENT

ಪ್ಯಾಲೇಸ್ಟಿನಿಯನ್ನರಿಗೆ ₹2.5 ಕೋಟಿ ನೆರವು ನೀಡುವುದಾಗಿ ಘೋಷಿಸಿದ ಮಲಾಲಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2023, 7:43 IST
Last Updated 19 ಅಕ್ಟೋಬರ್ 2023, 7:43 IST
<div class="paragraphs"><p>ಮಲಾಲಾ ಯೂಸುಫ್‌ಝೈ </p></div>

ಮಲಾಲಾ ಯೂಸುಫ್‌ಝೈ

   

ನವದೆಹಲಿ: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಝೈ ಅವರು ಪ್ಯಾಲೇಸ್ಟಿನಿಯನ್ನರಿಗೆ ಸಹಾಯ ಮಾಡುವ ಮೂರು ದತ್ತಿಗಳಿಗೆ ಸುಮಾರು ₹2.5 ಕೋಟಿ ನೆರವು ನೀಡುವುದಾಗಿ ಹೇಳಿದ್ದಾರೆ.

ಗಾಜಾದ ಆಸ್ಪತ್ರೆ ನಡೆದ ಭೀಕರ ದಾಳಿಯಿಂದಾಗಿ 500 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದು, ಬಹಳ ಗಾಬರಿಯಾಗಿದೆ. ಎಂದ ಅವರು ವಿಡಿಯೊ ಮೂಲಕ ಹೇಳಿಕೆ ನೀಡಿದ್ದಾರೆ. ’ಕದನ ವಿರಾಮ ನೀಡಿ ಗಾಜಾದಲ್ಲಿರುವವರಿಗೆ ಮಾನವೀಯ ನೆರವು ನೀಡಲು ಇಸ್ರೇಲ್‌ ಸರ್ಕಾರ ಅನುಮತಿ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಗಾಜಾದ ಅಹ್ಲಿ ಅರಬ್‌ ಆಸ್ಪತ್ರೆ ಮೇಲೆ  ಇಸ್ರೇಲ್‌ನ ಸೇನೆ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 500 ಮಂದಿ ಹತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.