ADVERTISEMENT

ಗೃಹಬಂಧನ ಕೋರಿದ್ದ ಮಲೇಷ್ಯಾ ಮಾಜಿ ಪ್ರಧಾನಿ ನಜೀಬ್‌ ರಜಾಕ್‌ ಅರ್ಜಿ ವಜಾ

ಏಜೆನ್ಸೀಸ್
Published 3 ಜುಲೈ 2024, 12:13 IST
Last Updated 3 ಜುಲೈ 2024, 12:13 IST
<div class="paragraphs"><p>ನಜೀಬ್‌ ರಜಾಕ್‌&nbsp;</p></div>

ನಜೀಬ್‌ ರಜಾಕ್‌ 

   

ಕೌಲಾಲಂಪುರ: ಸೆರೆವಾಸದ ಉಳಿದ ಅವಧಿಯನ್ನು ಗೃಹಬಂಧನದಲ್ಲಿ ಕಳೆಯಲು ಅವಕಾಶ ನೀಡುವಂತೆ ಕೋರಿ ಮಲೇಷ್ಯಾದ ಮಾಜಿ ಪ್ರಧಾನಿ ನಜೀಬ್‌ ರಜಾಕ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ರಜಾಕ್‌ ಅವರು, ಜೈಲಿನ ಬದಲು ಗೃಹಬಂಧನದಲ್ಲಿ ಇರಲು ಅನುಮತಿ ನೀಡುವಂತೆ ಕೋರಿದ್ದರು. ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಅವರ ಪರ ವಕೀಲರು ತಿಳಿಸಿದ್ದಾರೆ. 

ADVERTISEMENT

70 ವರ್ಷ ವಯಸ್ಸಿನ ರಜಾಕ್‌ ಅವರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಯಾಗಿದ್ದು, 2028ರ ಆ.23ರಂದು ಸೆರೆವಾಸ ಅಂತ್ಯವಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.