ಕ್ವಾಲಾಲಂಪುರ: ಇಸ್ಲಾಮಿಕ್ ವ್ಯಾಪಾರ ಸಮೂಹಕ್ಕೆ ಸೇರಿದ 20 ಕಲ್ಯಾಣ ಕೇಂದ್ರಗಳ ಮೇಲೆ ದಾಳಿ ನಡೆಸಿ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದ 402 ಮಕ್ಕಳನ್ನು ರಕ್ಷಿಸಲಾಗಿದ್ದು, 171 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಲೇಷ್ಯಾದ ಪೊಲೀಸ್ ಇನ್‌ಸ್ಪೆಕ್ಟರ್ ಜನರಲ್ ರಜಾರುದ್ದೀನ್ ಹುಸೇನ್ ತಿಳಿಸಿದ್ದಾರೆ.
ಗ್ಲೋಬಲ್ ಇಖ್ವಾನ್ ಸರ್ವೀಸಸನ್ ಎಂಬ ವ್ಯಾಪಾರ ಸಮೂಹವು ನಡೆಸುತ್ತಿದ್ದ ಕಲ್ಯಾಣ ಕೇಂದ್ರಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ತನಿಖೆ ನಡೆಸಿದ ನಂತರ ಕೇಂದ್ರಗಳ ಮೇಲೆ ದಾಳಿ ನಡೆಸಲಾಯಿತು. 1ರಿಂದ 17 ವರ್ಷ ವಯೋಮಾನದ 201 ಬಾಲಕರು ಹಾಗೂ 201 ಬಾಲಕಿಯರನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.