ADVERTISEMENT

ಮಾಲಿಯಲ್ಲಿ ಮಿಲಿಟರಿ ದಂಗೆ: ಅಧ್ಯಕ್ಷ, ಪ್ರಧಾನಿ ಬಂಧನ

ಏಜೆನ್ಸೀಸ್
Published 25 ಮೇ 2021, 14:54 IST
Last Updated 25 ಮೇ 2021, 14:54 IST
ಮಾಲಿ ಅಧ್ಯಕ್ಷ ಬಹ್ ಎನ್ಡಾವ್
ಮಾಲಿ ಅಧ್ಯಕ್ಷ ಬಹ್ ಎನ್ಡಾವ್   

ಬಮಾಕೊ: ಒಂಬತ್ತು ತಿಂಗಳ ಹಿಂದೆ ನಡೆದ ದಂಗೆಯಲ್ಲಿ ಅಧಿಕಾರವನ್ನು ವಶಪಡಿಸಿಕೊಂಡಿದ್ದ ಸೇನೆಯ ಇಬ್ಬರು ಸದಸ್ಯರನ್ನು ಸರ್ಕಾರದ ಪುನರ್‌ರಚನೆ ವೇಳೆಯಲ್ಲಿ ಕೈಬಿಟ್ಟ ಕೆಲವೇ ಗಂಟೆಗಳಲ್ಲಿ ದಂಗೆಕೋರ ಮಿಲಿಟರಿ ಪಡೆಯು ಸೋಮವಾರ ಮಾಲಿಯ ಅಧ್ಯಕ್ಷ ಹಾಗೂ ಪ್ರಧಾನಿಯನ್ನು ಬಂಧಿಸಿದ್ದಾರೆ ಎಂದು ವಿಶ್ವಸಂಸ್ಥೆಯು ತಿಳಿಸಿದೆ.

ಬಂಧಿತ ಮಾಲಿ ಅಧ್ಯಕ್ಷ ಬಹ್ ಎನ್ಡಾವ್ ಹಾಗೂ ಪ್ರಧಾನಿ ಮೊಕ್ಟರ್ ಓವಾನೆ ಅವರನ್ನು ಕಾಟಿಯ ಮಿಲಿಟರಿ ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿದೆ. ದಂಗೆ ಎದ್ದಿರುವ ಮಿಲಿಟರಿಯ ಕ್ರಮವನ್ನು ಖಂಡಿಸಿರುವ ಆಫ್ರಿಕನ್ ಒಕ್ಕೂಟ ಹಾಗೂ ವಿಶ್ವಸಂಸ್ಥೆಯು ಇಬ್ಬರನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ತಾಕೀತು ಮಾಡಿವೆ.

ಪಶ್ಚಿಮ ಆಫ್ರಿಕಾದ ಪ್ರಾದೇಶಿಕ ಬಣ ‘ಇಕೋವಾಸ್’ ಮತ್ತು ಅಂತರರಾಷ್ಟ್ರೀಯ ಸಮುದಾಯದ ಇತರ ಸದಸ್ಯರು ಈ ಕುರಿತು ಜಂಟಿ ಹೇಳಿಕೆಯನ್ನು ನೀಡಿದ್ದು, ಬಲವಂತದ ರಾಜೀನಾಮೆ ಸೇರಿದಂತೆ ಯಾವುದೇ ರೀತಿಯ ದಬ್ಬಾಳಿಕೆಯನ್ನು ಅಂತರರಾಷ್ಟ್ರೀಯ ಸಮುದಾಯವು ತಿರಸ್ಕರಿಸುತ್ತದೆ. ತಕ್ಷಣವೇ ಅವರಿಬ್ಬರನ್ನು ಬಿಡುಗಡೆ ಮಾಡಿ ಎಂದೂ ಆಗ್ರಹಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.