ಉತಾಹ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಇತರ ಕೆಲವು ಅಧಿಕಾರಿಗಳಿಗೆ ಆನ್‌ಲೈನ್ ಮೂಲಕ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ತಂಡ ಬುಧವಾರ ಹತ್ಯೆಗೈದಿದೆ.
ಬೈಡನ್ ಅವರು 'ಉತಾಹ್' ರಾಜ್ಯಕ್ಕೆ ಗುರುವಾರ ಭೇಟಿ ನೀಡಲು ಸಮಯ ನಿಗದಿಯಾಗಿದೆ. ಈ ಭೇಟಿ ಹಿನ್ನೆಲೆಯಲ್ಲಿ ಕ್ರೇಗ್ ರಾಬರ್ಟ್‌ಸನ್ ಎಂಬಾತ ಫೇಸ್‌ಬುಕ್‌ನಲ್ಲಿ ಬೆದರಿಕೆ ಹಾಕಿದ್ದ. 'ಬೈಡನ್ ಆಗಮಿಸುತ್ತಿರುವ ವಿಚಾರ ತಿಳಿದಿದೆ. ಎಂ24 ಸ್ನೈಪರ್ ರೈಫಲ್ ಸಿದ್ಧಪಡಿಸಿಕೊಳ್ಳುತ್ತಿದ್ದೇನೆ' ಎಂದು ಬರೆದುಕೊಂಡಿದ್ದ. ಈ ಸಂಬಂಧ ದೂರು ದಾಖಲಾಗಿತ್ತು.
ಬಂಧನದ ವಾರೆಂಟ್ ಜೊತೆಗೆ ಬಂದ ಎಫ್‌ಬಿಐ ತಂಡ ಪ್ರೊವೊ ನಗರದಲ್ಲಿರುವ ರಾಬರ್ಟ್‌ಸನ್ ಮನೆ ಮೇಲೆ ದಾಳಿ ಮಾಡಿತ್ತು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ರಾಬರ್ಟ್‌ಸನ್ ಮೃತಪಟ್ಟಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಆರೋಪಿಯು ಬೈಡನ್ ಮಾತ್ರವಲ್ಲದೆ, ಅಮೆರಿಕದ ಮಾಜಿ ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ಮಾಡಿರುವ ಪ್ರಾಸಿಕ್ಯೂಟರ್ ಸೇರಿದಂತೆ ಹಲವು ಅಧಿಕಾರಿಗಳಿಗೂ ಕೊಲೆ ಬೆದರಿಕೆ ಒಡ್ಡಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.