ಬೀಜಿಂಗ್: ಸುರಂಗದ ಗೋಡೆಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ನಲ್ಲಿದ್ದ 14 ಜನರು ಮೃತಪಟ್ಟಿರುವ ಘಟನೆ ಚೀನಾದಲ್ಲಿ ನಡೆದಿದೆ. ಉತ್ತರ ಚೀನಾದ ಶಾನ್ ಕ್ಸಿ ಪ್ರದೇಶದಲ್ಲಿ ನಡೆದ ಈ ಅಪಘಾತದಲ್ಲಿ 37 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಹೊಹ್ಹೋಟ್– ಬೇಯಿಹೈ ಎಕ್ಸ್ಪ್ರೆಸ್ ವೇನಲ್ಲಿರುವ ಸುರಂಗದ ಗೋಡೆಗೆ ಬಸ್ ಡಿಕ್ಕಿಹೊಡೆದಿದೆ. ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದ್ದು ಅಪಘಾತಕ್ಕೆ ಕಾರಣ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.