ADVERTISEMENT

ಚೀನಾದಲ್ಲಿ ಭೂಕಂಪ: 127 ಮಂದಿ ಸಾವು, 700ಕ್ಕೂ ಹೆಚ್ಚು ಮಂದಿಗೆ ಗಾಯ

ಏಜೆನ್ಸೀಸ್
Published 19 ಡಿಸೆಂಬರ್ 2023, 9:43 IST
Last Updated 19 ಡಿಸೆಂಬರ್ 2023, 9:43 IST
<div class="paragraphs"><p>ಚೀನಾದ ಗನ್ಸು ಪ್ರಾಂತ್ಯದಲ್ಲಿ ಸೋಮವಾರ ಮಧ್ಯರಾತ್ರಿ ಭೂಕಂಪ ಸಂಭವಿಸಿದ ಪರಿಣಾಮ ಮನೆಗಳಿಗೆ ಹಾನಿಯಾಗಿದೆ</p></div>

ಚೀನಾದ ಗನ್ಸು ಪ್ರಾಂತ್ಯದಲ್ಲಿ ಸೋಮವಾರ ಮಧ್ಯರಾತ್ರಿ ಭೂಕಂಪ ಸಂಭವಿಸಿದ ಪರಿಣಾಮ ಮನೆಗಳಿಗೆ ಹಾನಿಯಾಗಿದೆ

   

–ಎಎಫ್‌ಪಿ ಚಿತ್ರ

ಬೀಜಿಂಗ್‌/ಹೈಡಾಂಗ್: ವಾಯವ್ಯ ಚೀನಾದ ಗನ್ಸು ಮತ್ತು ಕಿಂಗ್‌ಹೈ ‍ಪ್ರಾಂತ್ಯದಲ್ಲಿ ಸೋಮವಾರ ಮಧ್ಯರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು 127 ಜನರು ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್‌ ಮಾಪನದಲ್ಲಿ ಭೂಕಂಪದ ತೀವ್ರತೆ 6.2 ದಾಖಲಾಗಿದೆ.

ADVERTISEMENT

ಸೋಮವಾರ ಮಧ್ಯರಾತ್ರಿ 11.59ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಗನ್ಸು ಪ್ರಾಂತ್ಯದ ಲಿಯುಗೌ ಟೌನ್‌ಶಿಪ್ ಬಳಿ  ಭೂಕಂಪದ ಕೇಂದ್ರ ಬಿಂದು ಇದೆ. ಇಲ್ಲಿಂದ ಸುಮಾರು 570 ಕಿ.ಮೀ ದೂರದಲ್ಲಿರುವ ಪ್ರಮುಖ ನಗರವಾದ ಕ್ಸಿಯಾನ್‌ವರೆಗೂ ಭೂಮಿ ಅಲುಗಾಡಿದೆ ಎಂದು ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ತಿಳಿಸಿದೆ. 

ಭೂಕಂಪನದಿಂದ ಭಯ ಭೀತರಾದ ಜನರು ರಾತ್ರಿ ಮನೆಯಿಂದ ಹೊರಕ್ಕೆ ಓಡಿ ಬಂದು, ರಸ್ತೆಗಳಲ್ಲಿ ರಾತ್ರಿ ಕಳೆದಿದ್ದಾರೆ. ಹಲವು ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡು ನೀರಿನ ಸಮಸ್ಯೆಯೂ ಉಂಟಾಗಿದೆ.

ಗನ್ಸು ಪ್ರಾಂತ್ಯದಲ್ಲಿ 105 ಜನರು ಹಾಗೂ ಕಿಂಗ್‌ಹೈ ಪ್ರಾಂತ್ಯದಲ್ಲಿ 13 ಜನರು ಮೃತಪಟ್ಟಿದ್ದಾರೆ. 579 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.