ADVERTISEMENT

ಚೀನಾದಲ್ಲಿ ಭಾರಿ ಮಳೆ: 11 ಮಂದಿ ಸಾವು, 14 ಮಂದಿ ನಾಪತ್ತೆ

ಪಿಟಿಐ
Published 24 ಆಗಸ್ಟ್ 2024, 14:37 IST
Last Updated 24 ಆಗಸ್ಟ್ 2024, 14:37 IST
...
...   

ಬೀಜಿಂಗ್: ಚೀನಾದ ಲಿಯೋನಿಂಗ್ ಪ್ರಾಂತ್ಯದ ಹುಲುಡಾವೊದಲ್ಲಿ ಧಾರಾಕಾರ ಮಳೆಯಾಗಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ 11 ಜನರು ಮೃತಪಟ್ಟಿದ್ದು, 14 ಮಂದಿ ಕಾಣೆಯಾಗಿದ್ದಾರೆ.

ಮಳೆಯಿಂದಾಗಿ ಹುಲುಡಾವೊ ನಗರದ 1.88 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ₹12,69 ಕೋಟಿ ಮೌಲ್ಯದ ರಸ್ತೆ, ಸೇತುವೆ, ಮನೆಗಳು ಮತ್ತು ಅಪಾರ ಪ್ರಮಾಣದ ಬೆಳೆ ನಾಶವಾಗಿವೆ ಎಂದು ಸ್ಥಳೀಯ ಮಾಧ್ಯಮವು ವರದಿ ಮಾಡಿದೆ. 

ಅಲ್ಲದೇ, ಒಂಭತ್ತು ರಾಷ್ಟ್ರೀಯ ಹಾಗೂ ಪ್ರಮುಖ ಪ್ರಾಂತೀಯ ರಸ್ತೆಗಳು, 210 ಗ್ರಾಮೀಣ ರಸ್ತೆಗಳು ಮತ್ತು 187 ಸೇತುವೆಗಳು ಹಾನಿಗೊಳಗಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.