ADVERTISEMENT

ಇಂಡೋನೇಷ್ಯಾದ ತೈಲ ಸಂಗ್ರಹಗಾರಕ್ಕೆ ಬೆಂಕಿ:14 ಮಂದಿ ಸಾವು

ಐಎಎನ್ಎಸ್
Published 4 ಮಾರ್ಚ್ 2023, 2:46 IST
Last Updated 4 ಮಾರ್ಚ್ 2023, 2:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಕಾರ್ತ(ಇಂಡೋನೇಷ್ಯಾ): ಉತ್ತರ ಜಕಾರ್ತದಲ್ಲಿರುವ ಇಂಧನ ಸಂಗ್ರಹಗಾರ ಬೆಂಕಿ ಹೊತ್ತಿಕೊಂಡ ಕಾರಣ 14 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದುರ್ಘಟನೆ ಶುಕ್ರವಾರ ಸಂಜೆ ನಡೆದಿದೆ. ಇತರ ಸಂತ್ರಸ್ತರಿಗಾಗಿ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಇಲ್ಲಿನ ಹಿರಿಯ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಇಂಧನ ಸಂಗ್ರಹಗಾರವನ್ನು ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ಸಂಸ್ಥೆ ‘ಪಿಟಿ ಪರ್ಟಮಿನಾ’ ನಿರ್ವಹಿಸುತ್ತಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬೆಂಕಿಯನ್ನು ನಂದಿಸುವ ಹಾಗೂ ಇಲ್ಲಿನ ಕಾರ್ಮಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಪಿಟಿ ಪೆರ್ಟಮಿನಾ ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.