ಢಾಕಾ(ಬಾಂಗ್ಲಾದೇಶ): ಚಿತ್ತಗಾಂಗ್‌ನ ಸೀತಾಕುಂಡನಲ್ಲಿರುವ ಆಮ್ಲಜನಕ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ಶೀಮಾ ಆಟೋಮ್ಯಾಟಿಕ್ ರಿ-ರೋಲಿಂಗ್ ಮಿಲ್ಸ್ ಲಿಮಿಟೆಡ್'ನ ಆಮ್ಲಜನಕ ಘಟಕದಲ್ಲಿ ಶನಿವಾರ ಮಧ್ಯಾಹ್ನ ಈ ಸ್ಫೋಟ ಸಂಭವಿಸಿದೆ.
ಮೃತರಲ್ಲಿ ಐವರನ್ನು ಶಮ್ಸುಲ್ ಆಲಂ, ಫರೀದ್, ರತನ್ ಲಖ್ರೆತ್, ಎಂಡಿ ಶಾಹಿದ್ ಮತ್ತು ಎಂಡಿ ಖಾದರ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಚಟ್ಟೋಗ್ರಾಮ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಲ್ಲಿನ ಸಹಾಯಕ ಕಮಿಷನರ್ ಎಂ.ಡಿ ಫಕ್ರುಜ್ಜಮಾನ್ ಐಎಎನ್‌ಎಸ್‌ಗೆ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕಳೆದ ವರ್ಷ ಜೂನ್ 4ರಲ್ಲಿ ಚತ್ತೋಗ್ರಾಮ ಸೀತಾಕುಂಡದಲ್ಲಿನ ಬಿಎಂ ಕಂಟೇನರ್ ಡಿಪೋದಲ್ಲಿ ಸ್ಫೋಟ ಸಂಭವಸಿತ್ತು. 51 ಮಂದಿ ಮೃತಪಟ್ಟಿದ್ದರು. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.