ADVERTISEMENT

ಪಾಕಿಸ್ತಾನ: ಮಾಜಿ ಪ್ರಧಾನಿ ಷರೀಫ್ ಪುತ್ರಿ ಮರ್ಯಮ್‌ ಪಂಜಾಬ್‌ನ ಮೊದಲ ಮಹಿಳಾ ಸಿಎಂ

ಏಜೆನ್ಸೀಸ್
Published 26 ಫೆಬ್ರುವರಿ 2024, 10:35 IST
Last Updated 26 ಫೆಬ್ರುವರಿ 2024, 10:35 IST
<div class="paragraphs"><p>ಮರ್ಯಮ್‌ ನವಾಜ್</p></div>

ಮರ್ಯಮ್‌ ನವಾಜ್

   

(ಚಿತ್ರಕೃಪೆ–ರಾಯಿಟರ್ಸ್)

ಲಾಹೋರ್: ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಮನಿರ್ದೇಶಿತ ನಾಯಕಿ ಮರ್ಯಮ್‌ ನವಾಜ್ ಸೋಮವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ADVERTISEMENT

12 ಕೋಟಿ ಜನರು ನೆಲೆಸಿರುವ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ (ಪಿಟಿಐ) ಬೆಂಬಲಿತ ಸುನ್ನಿ ಇತ್ತೆಹಾದ್ ಕೌನ್ಸಿಲ್ (SIC)ನ ನಾಯಕ ರಾಣಾ ಅಫ್ತಾಬ್ ವಿರುದ್ಧ ಮರ್ಯಮ್ ಜಯಗಳಿಸಿದ್ದಾರೆ.

ಎಸ್‌ಐಸಿ ಸದಸ್ಯರ ಬಹಿಷ್ಕಾರದಿಂದಾಗಿ ರಾಣಾ ಅಫ್ತಾಬ್ ಅಹ್ಮದ್ ಶೂನ್ಯ ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ.

ತಾಯಿಯ ಸಮಾಧಿಗೆ ಭೇಟಿ:

ಪಂಜಾಬ್ ಅಸೆಂಬ್ಲಿಗೆ ಹೋಗುವ ಮುನ್ನ ಮರ್ಯಮ್ ಜತಿ ಉಮ್ರಾದಲ್ಲಿ ತನ್ನ ತಾಯಿಯ ಸಮಾಧಿಗೆ ಭೇಟಿ ನೀಡಿದರು.

‘ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಪಂಜಾಬ್‌ನ ಸಿಎಂ ಆಗಲಿದ್ದಾರೆ. ಪಂಜಾಬ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಮಹಿಳೆ ಮರ್ಯಮ್ ನವಾಜ್ ಷರೀಫ್ ! ಎಂದು ಚುನಾವಣೆಯ ಮೊದಲೇ ಪಿಎಂಎಲ್-ಎನ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿತ್ತು.

ಮರ್ಯಮ್ ನವಾಜ್ ಬಗ್ಗೆ ಒಂದಿಷ್ಟು..

  • ಮರ್ಯಮ್ ನವಾಜ್ ಪಾಕಿಸ್ತಾನದಲ್ಲಿ 3 ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಪುತ್ರಿ.

  • ಆರಂಭದಲ್ಲಿ ಸಮಾಜ ಸೇವಾ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.

  • 1992ರಲ್ಲಿ, ಅವರು ಸಫ್ದರ್ ಅವನ್ ಎಂಬುವವರನ್ನು ವಿವಾಹವಾದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

  • ಸಫ್ದರ್ ಆ ಸಮಯದಲ್ಲಿ ಪಾಕಿಸ್ತಾನದ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದರು.

  • ಬಳಿಕ ನವಾಜ್ ಷರೀಫ್ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರಾದಲ್ಲಿದ್ದಾಗ ಭದ್ರತಾ ಅಧಿಕಾರಿಯಾಗಿದ್ದರು.

  • 2012ರಲ್ಲಿ ಅವರು ರಾಜಕೀಯಕ್ಕೆ ಪ್ರವೇಶಿಸಿದರು.

  • 2013ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿದ್ದರು.

  • 2024ರ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ, ಅವರು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ (NA) ಮತ್ತು ಪಂಜಾಬ್‌ನ ಪ್ರಾಂತೀಯ ಅಸೆಂಬ್ಲಿಗೆ ಮೊದಲ ಬಾರಿಗೆ ಚುನಾಯಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.