ADVERTISEMENT

ಲಾಸ್ ಏಂಜಲೀಸ್‌: ಕೋವಿಡ್‌ ಪ್ರಕರಣಗಳು ಹೆಚ್ಚಳ

ಮನೆ ಒಳಗೂ ಮಾಸ್ಕ್ ಕಡ್ಡಾಯವಾಗುವ ಸಾಧ್ಯತೆ

ಏಜೆನ್ಸೀಸ್
Published 14 ಜುಲೈ 2022, 13:53 IST
Last Updated 14 ಜುಲೈ 2022, 13:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಸ್‌ ಏಂಜಲೀಸ್: ಲಾಸ್‌ ಏಂಜಲೀಸ್ ನಗರದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಹೀಗೇ ಮುಂದುವರಿದರೆ ಮನೆಯ ಒಳಗೂ ಮಾಸ್ಕ್‌ ಧರಿಸುವುದು ಕಡ್ಡಾಯವಾಗಬಹುದು ಎಂದು ಆರೋಗ್ಯ ಇಲಾಖೆ ನಿರ್ದೇಶಕ ಬಾರ್ಬರ ಫೆರೆರ್‌ ತಿಳಿಸಿದ್ದಾರೆ.

ಕೊರೊನಾ ವೈರಸ್‌ನ ರೂಪಾಂತರಿ ಓಮೈಕ್ರಾನ್‌ನ ಉಪತಳಿಗಳಾದ ಬಿಎ.5 ಮತ್ತು ಬಿಎ.4 ಸೋಂಕು ಪ್ರಕರಣಗಳ ಸಂಖ್ಯೆ ದೇಶದಾದ್ಯಂತ ವಿಪರೀತ ಹೆಚ್ಚುತ್ತಿದೆ. ಇತ್ತೀಚಿನ ವಾರಗಳಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಸಹ ಏರಿಕೆಯಾಗುತ್ತಿದೆ. ಹೀಗಾಗಿ ಹೊಸ ರೂಪಾಂತರಿ ತಳಿಗಳ ಸೋಂಕು ಪ್ರಸರಣ ತಡೆಯುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಇಲಾಖೆ ಎಚ್ಚರಿಸಿದೆ.

ದೇಶವನ್ನು ಉದ್ದೇಶಿಸಿ ಟಿ.ವಿ ಮೂಲಕ ಮಾತನಾಡಿದ, ಕೋವಿಡ್‌–19 ಸಮನ್ವಯಾಧಿಕಾರಿ ಡಾ.ಆಶೀಶ್‌ ಝಾ, ಅರ್ಹರು ಕೋವಿಡ್‌ ಲಸಿಕೆಯ ಬೂಸ್ಟರ್‌ ಡೋಸ್‌ ಪಡೆಯುವಂತೆ ಮನವಿ ಮಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.