ADVERTISEMENT

ಕರಾಚಿ: ಬಾಂಬ್‌ ದಾಳಿಗೆ ಇಬ್ಬರು ಚೀನಿ ಪ್ರಜೆಗಳ ಸಾವು

ಪಿಟಿಐ
Published 7 ಅಕ್ಟೋಬರ್ 2024, 2:16 IST
Last Updated 7 ಅಕ್ಟೋಬರ್ 2024, 2:16 IST
<div class="paragraphs"><p>ಸ್ಫೋಟ </p></div>

ಸ್ಫೋಟ

   

(ಐಸ್ಟೋಕ್ ಸಾಂದರ್ಭಿಕ ಚಿತ್ರ)

ಕರಾಚಿ: ಪಾಕಿಸ್ತಾನದ ಕರಾಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರವಲಯದಲ್ಲಿ ಭಾನುವಾರ ತಡರಾತ್ರಿ ಬಾಂಬ್‌ ದಾಳಿ ನಡೆದಿದ್ದು, ಇಬ್ಬರು ಚೀನಾ ಪ್ರಜೆಗಳು ಮೃತಪಟ್ಟಿದ್ದಾರೆ. ದಾಳಿಯ ಹೊಣೆಯನ್ನು ಬಲೂಚ್‌ ಲಿಬರೇಶನ್‌ ಆರ್ಮಿ(ಬಿಎಲ್‌ಎ) ಹೊತ್ತುಕೊಂಡಿದೆ.

ADVERTISEMENT

ಬಲೂಚಿಸ್ತಾನ ಪ್ರತ್ಯೇಕತಾವಾದಿ ಸಂಘಟನೆಯಾಗಿರುವ ಬಿಎಲ್‌ಎ, ಚೀನಾ ಪ್ರಜೆಗಳನ್ನು ಗುರಿಯಾಗಿಸಿ ಆತ್ಮಾಹುತಿ ದಾಳಿ ನಡೆಸಿರುವುದಾಗಿ ಸೋಮವಾರ ತಿಳಿಸಿದೆ. ಘಟನೆಯಲ್ಲಿ ಬೆಂಗಾವಲು ಪಡೆ ಸಿಬ್ಬಂದಿ ಸಹಿತ ಎಂಟು ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಸಿದ್ದಾರೆ. 

ಮೃತರು ಚೀನಾದ ಸಹಕಾರದೊಂದಿಗೆ ಪಾಕಿಸ್ತಾನ ಆರಂಭಿಸಿರುವ ಪೋರ್ಟ್‌ ಕಾಸಿಂ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಚೀನಾ ರಾಯಭಾರ ಕಚೇರಿ ತಿಳಿಸಿದೆ. ಚೀನಾ ಮುಂದಾಳತ್ವದ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯು ಪಾಕಿಸ್ತಾನದಲ್ಲಿ ಇದೇ 15 ಮತ್ತು 16ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.