ದುಬೈ: ಈಜಿಪ್ಟ್‌ನ ಸೂಯೆಜ್ ಕಾಲುವೆಯ ಮಾನವ ನಿರ್ಮಿತ ಜಲಮಾರ್ಗದಲ್ಲಿ ವಿಶ್ವದ ಅತಿದೊಡ್ಡ ಸರಕು ‘ಎಂ.ವಿ. ಎವರ್‌ಗ್ರೀನ್’ ಮಂಗಳವಾರ ಪಕ್ಕಕ್ಕೆ ವಾಲಿದ್ದರಿಂದ ಕಾಲುವೆಯಲ್ಲಿ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
‘ಎವರ್‌ಗ್ರೀನ್’ ಹಡಗು ಕಾಲುವೆಯಲ್ಲಿ ಪಕ್ಕಕ್ಕೆ ತಿರುಗಲು ಕಾರಣವೇನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಜಾಗತಿಕ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಕಂಪನಿ ಜಿಎಂಸಿ ಹೇಳಿದೆ.
‘ಬಲವಾದ ಗಾಳಿ ಬೀಸಿದ್ದರಿಂದ ಹಡಗು ವಾಲಿರಬಹುದು. ಹಡಗಿನಲ್ಲಿರುವ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾವುದೇ ಸಾವುನೋವು ಸಂಭವಿಸಿಲ್ಲ. ಪ್ರತಿದಿನ ಸೂಯೆಜ್ ಕಾಲುವೆಯ ಈ ಜಲಮಾರ್ಗದಲ್ಲಿ ಸುಮಾರು 50 ಹಡಗುಗಳು ಸಂಚರಿಸುತ್ತವೆ. ಕನಿಷ್ಠ ಎರಡು ದಿನ ಇಲ್ಲಿ ಸಂಚಾರ ಸಾಧ್ಯವಿಲ್ಲ ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.