ವಾಷಿಂಗ್ಟನ್: ಭಾರತಕ್ಕೆ ಒದಗಿಸಲಾಗಿರುವ ‘ಎಂಎಚ್–60ಆರ್ ಸೀಹಾಕ್’ ಹೆಲಿಕಾಪ್ಟರ್‌ಗಳು ಹಾಗೂ ‘ಪಿ–8 ಪೊಸಿಡಾನ್’ ಯುದ್ಧವಿಮಾನಗಳಿಂದ ಕಡಲು ಗಡಿ ಕಣ್ಗಾವಲಿಗೆ ಮತ್ತಷ್ಟು ಹೆಚ್ಚಲಿದೆ. ಸಾಗರ ಗಡಿ ರಕ್ಷಣೆಗೆ ಸಂಬಂಧಿಸಿ ಉಭಯ ದೇಶಗಳ ಜಂಟಿ ಕಾರ್ಯಾಚರಣೆಗೂ ಬಲ ಸಿಗುವುದು ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಇಲಾಖೆಯ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ, ‘ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಕಣ್ಗಾವಲು ಕಾರ್ಯಕ್ಕಾಗಿ ‘ಪಿ–8 ಪೊಸಿಡಾನ್’ ಯುದ್ಧವಿಮಾನಗಳನ್ನು ಭಾರತ ಬಳಸುತ್ತಿದೆ. ಅಮೆರಿಕದ ಹೊರಗೆ ಈ ಅತ್ಯಾಧುನಿಕ ಯುದ್ಧವಿಮಾನಗಳನ್ನು ಬಳಸುತ್ತಿರುವ ಮೊದಲ ದೇಶ ಎಂಬ ಹೆಗ್ಗಳಿಕೆ ಭಾರತದ್ದು’ ಎಂದು ಹೇಳಿದರು.
‘ಕಡಲ ಗಡಿ ರಕ್ಷಣೆ, ಕಾರ್ಯಾಚರಣೆ ವೇಳೆ ಉಭಯ ದೇಶಗಳ ನೌಕಾಪಡೆಗಳ ನಡುವಿನ ಸಹಕಾರ ಮತ್ತಷ್ಟು ಗಟ್ಟಿಗೊಳ್ಳಲು ಸಾಧ್ಯವಾಗಲಿದೆ’ ಎಂದೂ ಅವರು ಹೇಳಿದರು.
ಭಾರತದ ನೌಕಾಪಡೆ ಒಟ್ಟು 24 ‘ಎಂಎಚ್–60ಆರ್ ಸೀಹಾಕ್’ ಹೆಲಿಕಾಪ್ಟರ್‌ಗಳನ್ನು ಖರೀದಿಸುತ್ತಿದೆ. ಅಮೆರಿಕದ ಲಾಕ್‌ಹೀಡ್ ಮಾರ್ಟಿನ್ ಕಂಪನಿ ಈ ಹೆಲಿಕಾಪ್ಟರ್‌ಗಳನ್ನು ತಯಾರಿಸುತ್ತಿದೆ. ಈ ಪೈಕಿ ಎರಡು ಹೆಲಿಕಾಪ್ಟರ್‌ಗಳನ್ನು ಇತ್ತೀಚೆಗೆ ಸ್ಯಾನ್ ಡಿಯಾಗೊನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ನೌಕಾಪಡೆಗೆ ಹಸ್ತಾಂತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.