ADVERTISEMENT

ದೇಶದ ಆಂತರಿಕ ಭದ್ರತೆಗೆ ಧಕ್ಕೆ: ಪಾಕ್‌ನಲ್ಲಿ ಎಕ್ಸ್‌ಗೆ ನಿಷೇಧ

ಪಿಟಿಐ
Published 18 ಏಪ್ರಿಲ್ 2024, 3:27 IST
Last Updated 18 ಏಪ್ರಿಲ್ 2024, 3:27 IST
<div class="paragraphs"><p>ಎಕ್ಸ್‌ ಲೋಗೊ</p></div>

ಎಕ್ಸ್‌ ಲೋಗೊ

   

ರಾಯಿಟರ್ಸ್‌ ಚಿತ್ರ

ಇಸ್ಲಾಮಾಬಾದ್‌: ಸಾಮಾಜಿಕ ಮಾಧ್ಯಮಗಳ ದುರುಪಯೋಗದ ಕುರಿತು ಕಳವಳ ವ್ಯಕ್ತಪಡಿಸಿದರೂ ಪರಿಹರಿಸಲು ವಿಫಲವಾದ ಹಿನ್ನೆಲೆ ರಾಷ್ಟ್ರೀಯ ಭದ್ರತಾ ಸಮಸ್ಯೆಗಳ ಕಾರಣದಿಂದ ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್ ಅನ್ನು ದೇಶದಲ್ಲಿ ನಿಷೇಧಿಸಲಾಗಿದೆ ಎಂದು ಪಾಕಿಸ್ತಾನ ಸರ್ಕಾರವು ಹೈಕೋರ್ಟ್‌ಗೆ ತಿಳಿಸಿದೆ.

ADVERTISEMENT

ಎಕ್ಸ್‌ಗೆ ಲಾಗಿನ್‌ ಆಗಲು ಸಾಧ್ಯವಾಗುತ್ತಿಲ್ಲ ಎಂದು ಪತ್ರಕರ್ತ ಎಹ್ತಿಶಮ್ ಅಬ್ಬಾಸಿ ಎನ್ನುವವರು ಸಲ್ಲಿಸಿದ ಅರ್ಜಿಯನ್ನು ಕೋರ್ಟ್‌ ವಿಚಾರಣೆ ನಡೆಸಿತ್ತು. ಈ ವೇಳೆ ರಾಷ್ಟ್ರೀಯ ಭದ್ರತೆಯನ್ನು ಎತ್ತಿಹಿಡಿಯುವ, ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ಮತ್ತು ನಮ್ಮ ರಾಷ್ಟ್ರದ ಸಮಗ್ರತೆಯನ್ನು ರಕ್ಷಿಸಲು ಎಕ್ಸ್‌ ಮೇಲೆ ನಿಷೇಧವನ್ನು ವಿಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ವಾದಿಸಿದೆ.

ಗುಪ್ತಚರ ಏಜೆನ್ಸಿಗಳ ವರದಿಗಳ ಆಧಾರದ ಮೇಲೆ ಆಂತರಿಕ ಸಚಿವಾಲಯವು ಫೆಬ್ರವರಿ 17 ರಂದು ‘ಮುಂದಿನ ಆದೇಶದವರೆಗೆ ತಕ್ಷಣವೇ ಎಕ್ಸ್ ಅನ್ನು ನಿರ್ಬಂಧಿಸುವಂತೆ ಕೇಳಿಕೊಂಡಿದೆ’ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.