ಕಳೆದ ವರ್ಷದ ಡಿಸೆಂಬರ್‌ನಿಂದ ಈ ವರೆಗೆ ಚೀನಾ ಸೇರಿದಂತೆ ಹಲವರು ರಾಷ್ಟ್ರಗಳಲ್ಲಿ ತಾಂಡವವಾಡುತ್ತಿರುವ ಕೊರೊನಾ ವೈರಸ್‌ನ ಸೂಕ್ಷ್ಮದರ್ಶಕ (ಮೈಕ್ರೋಸ್ಕೋಪ್) ಚಿತ್ರ ಇದೇ ಮೊದಲ ಬಾರಿಗೆ ಬಿಡುಗಡೆಯಾಗಿದೆ.
ಈ ಅಪಾಯಕಾರಿ ವೈರಸ್ ಮೇಲೆ ಅಧ್ಯಯನ ಕೈಗೊಂಡಿರುವ ವಿಶ್ವದ ಹಲವು ವಿಜ್ಞಾನಿಗಳು ಇದರ ಚಿತ್ರಗಳನ್ನು ಬಿಡುಗಡೆ ಮಾಡಲು ಈ ವರೆಗೆ ಆಸಕ್ತಿ ತೋರಿರಲಿಲ್ಲ.
ಆದರೆ, ಅಮೆರಿಕದ ರಾಷ್ಟ್ರೀಯ ಅಲರ್ಜಿ ಮತ್ತು ಸೋಂಕು ರೋಗಗಳ ಅಧ್ಯಯನ ಸಂಸ್ಥೆ (ಎನ್‌ಐಎಐಡಿ) ವಿಜ್ಞಾನಿಗಳು ಇದೇ ಮೊದಲ ಬಾರಿಗೆ ವೈರಸ್‌ನ ಸೂಕ್ಷ್ಮದರ್ಶಕ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.