ಬೈರೂತ್/ಜೆರುಸಲೇಂ: ಬಾರ್ಜಾ ಪಟ್ಟಣದ ಅಪಾರ್ಟ್‌ಮೆಂಟ್ ಮೇಲೆ ಮಂಗಳವಾರ ರಾತ್ರಿ ಇಸ್ರೇಲ್ ದಾಳಿ ನಡೆಸಿದ್ದು, ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದ 30 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಲೆಬನಾನ್‌ನ ನಾಗರಿಕ ರಕ್ಷಣಾ ಸೇವೆ ಬುಧವಾರ ತಿಳಿಸಿದೆ.
ಅಪಾರ್ಟ್‌ಮೆಂಟ್‌ನ ಅವಶೇಷಗಳಡಿ ಶೋಧ ಕಾರ್ಯ ಮುಂದುವರಿದಿದೆ.
ಯಾವುದೇ ಪ್ರದೇಶವನ್ನು ಗುರಿಯಾಗಿಸಿಕೊಳ್ಳದೆ, ಮುನ್ನೆಚ್ಚರಿಕೆಯನ್ನು ನೀಡದೆ ಇಸ್ರೇಲ್ ಸೇನೆಯು ವಾಯುದಾಳಿ ನಡೆಸಿದೆ.
‘ಅವಶೇಷಗಳಡಿ ಇನ್ನೂ ಎಷ್ಟು ಜನರು ಬದುಕುಳಿದಿದ್ದಾರೆ? ಅಥವಾ ಮೃತದೇಹಗಳಿವೆ? ಎಂಬುದು ಸ್ಪಷ್ಟವಾಗಿಲ್ಲ’ ಎಂದು ನಾಗರಿಕ ರಕ್ಷಣಾ ಅಧಿಕಾರಿ ಮುಸ್ತಫಾ ದಾನಾಜ್ ತಿಳಿಸಿದ್ದಾರೆ.
‘ಬೇರೆ ಯಾರೂ ಅವಶೇಷಗಳಡಿ ಇಲ್ಲ ಎಂದು ನಾವು ಭಾವಿಸಿದ್ದೇವೆ. ಆದರೆ, ನೆರೆಹೊರೆಯವರು ಇನ್ನೂ ಜನರಿದ್ದಾರೆ ಎಂದು ಹೇಳುತ್ತಿದ್ದಾರೆ’ ಎಂಬುದಾಗಿ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.