ADVERTISEMENT

ಮಾಲಿ ದಾಳಿ: ಹೊಣೆ ಹೊತ್ತ ಐಎಸ್‌

ಏಜೆನ್ಸೀಸ್
Published 3 ನವೆಂಬರ್ 2019, 20:15 IST
Last Updated 3 ನವೆಂಬರ್ 2019, 20:15 IST
   

ಬಮಾಕೊ: 49 ಸದಸ್ಯರ ಮಾಲಿ ಸೇನಾ ಪಡೆಯ ಮೇಲೆ ನಡೆದ ದಾಳಿ ಮತ್ತು ಫ್ರೆಂಚ್‌ ಸೈನಿಕನ ಸಾವಿಗೆ ಕಾರಣವಾದ ಸ್ಫೋಟವನ್ನು ತಾನೇ ನಡೆಸಿದ್ದು ಎಂಬುದಾಗಿ ಇಸ್ಲಾಮಿಕ್‌ ಸ್ಟೇಟ್‌ ಭಾನುವಾರ ಹೇಳಿಕೊಂಡಿದೆ. ‌

ಪಶ್ಚಿಮ ಆಫ್ರಿಕಾದ ಹಲವು ದೇಶಗಳು ಜಿಹಾದಿ ಹಿಂಸೆಯಿಂದ ನಲುಗುತ್ತಿರುವ ಸಂದರ್ಭದಲ್ಲಿ ನಡೆದ ಈ ದಾಳಿಯು ಮತ್ತಷ್ಟು ಆತಂಕ ಮೂಡಿಸಿದೆ.

ಇಂಡೆಲಿಮೇನ್‌ ಎಂಬಲ್ಲಿ ಮಾಲಿ ಸೇನಾ ಔಟ್‌ಪೋಸ್ಟ್ ಮೇಲೆ ಶುಕ್ರವಾರ ನಡೆದ ದಾಳಿಯಲ್ಲಿ 49 ಮಂದಿ ಸಾವಿಗೀಡಾಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.