ADVERTISEMENT

ಜಮೈಕಾದ ಟೋನಿ ಅನ್​ ಸಿಂಗ್‌ ವಿಶ್ವಸುಂದರಿ: ಭಾರತದ ಸುಮನ್‌ ರಾವ್‌ ರನ್ನರ್‌ ಅಪ್‌

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 7:28 IST
Last Updated 15 ಡಿಸೆಂಬರ್ 2019, 7:28 IST
   

ಲಂಡನ್​: ಇಂಗ್ಲೆಂಡ್‌ನಲ್ಲಿ ಶನಿವಾರರಾತ್ರಿ ನಡೆದ 2019ನೇ ಸಾಲಿನ ವಿಶ್ವಸುಂದರಿ ಸೌಂದರ್ಯ ಸ್ಪರ್ಧೆಯಲ್ಲಿಜಮೈಕಾದ ಟೋನಿ ಅನ್​ ಸಿಂಗ್ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ.ಭಾರತದ ಸುಮನ್​ ರಾವ್ ಮೂರನೇ ಸ್ಥಾನ ಪಡೆದರು.

ಕಳೆದ ವರ್ಷ ಆಯ್ಕೆಯಾಗಿದ್ದಭಾರತದ ಮಾನುಷಿ ಚಿಲ್ಲರ್ ಅವರಿಂದವಿಶ್ವಸುಂದರಿ ಕಿರೀಟವನ್ನು ಅನ್​ ಸಿಂಗ್ ಮುಡಿಗೇರಿಸಿಕೊಂಡರು.

ಲಂಡನ್‌ನಲ್ಲಿ 69ನೇ ಆವೃತ್ತಿಯವಿಶ್ವಸುಂದರಿ ಸ್ಪರ್ಧೆ ಕಳೆದನವೆಂಬರ್ 20ರಂದು ಆರಂಭವಾಗಿತು. ಈ ಬಾರಿ 120 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಅನೇಕ ಸುತ್ತುಗಳ ಬಳಿಕ 10 ಸ್ಪರ್ಧಿಗಳನ್ನು ಫೈನಲ್‌ಗೆ ಆಯ್ಕೆ ಮಾಡಲಾಗಿತ್ತು. ಇವರಲ್ಲಿ ಜಮೈಕಾದಟೋನಿ ಅನ್​ ಸಿಂಗ್, ಭಾರತದ ಸುಮನ್‌ ರಾವ್‌, ಫ್ರಾನ್ಸ್‌ ದೇಶದ ಓಪ್ಲೆ ಮೇಜಿನೊಪೈನಲ್‌ ಸುತ್ತಿನ ಕೊನೆಯ ಹಂತಕ್ಕೆ ಪ್ರವೇಶ ಪಡೆದಿದ್ದರು.

ADVERTISEMENT

ಅಂತಿಮವಾಗಿ23ರ ಹರೆಯದಜಮೈಕಾದ ಟೋನಿ ಅನ್​ ಸಿಂಗ್ ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡರು.ಓಪ್ಲೆ ಮೇಜಿನೊ ಮತ್ತು ಸುಮನ್‌ ರಾವ್‌ ಕ್ರಮವಾಗಿ ಮೊದಲನೇ ಮತ್ತು ಎರಡನೇ ರನ್ನರ್ ಅಪ್‌ ಆದರು.

ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿಟೋನಿ ಅನ್​ ಸಿಂಗ್ ಮನೋವಿಜ್ಞಾನ ಅಭ್ಯಾಸ ಮಾಡುತ್ತಿದ್ದಾರೆ.ಜಮೈಕಾದ 4ನೇ ವಿಶ್ವಸುಂದರಿ ಎಂಬ ಖ್ಯಾತಿ ಪಡೆದಿರುವ ಅನ್​ ಸಿಂಗ್ ಅವರಿಗೆ ಹಾಡು ಕೇಳುವುದು, ಅಡುಗೆ ಮಾಡುವುದು ಹಾಗೂ ಸೆಲ್ಫೀ ವಿಡಿಯೊ ಮಾಡುವುದೆಂದರೆ ಇಷ್ಟವಂತೆ. ಹಾಲಿವುಡ್‌ ಚಿತ್ರಗಳಲ್ಲಿ ನಟಿಸಬೇಕು ಎಂಬ ಕನಸುಅನ್​ ಸಿಂಗ್ ಅವರದ್ದು.

ಎರಡನೇ ರನ್ನರ್​ ಅಪ್​ ಆಗಿರುವ ಭಾರತ ಸುಮನ್​ ರಾವ್ ಈಗಾಗಲೇಮಿಸ್​ ಇಂಡಿಯಾ 2019 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 20ರ ಹರೆಯದ ಸುಮನ್‌ ಅಂತಿಮ ಸುತ್ತಿಗೆ ತೆರಳಿ ವಿಶ್ವಸುಂದರಿ ಕಿರೀಟ ಧರಿಸುವಲ್ಲಿ ವಿಫಲರಾದರು. ಮಾಡೆಲಿಂಗ್‌ ಕ್ಷೇತ್ರದಲ್ಲಿರುವ ಸುಮನ್‌ ನಟಿಯಾಗಬೇಕು ಎಂಬ ಕನಸನ್ನು ಕಟ್ಟಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.