ADVERTISEMENT

ಮೋದಿ ಬಾಸ್: ಆಸ್ಟ್ರೇಲಿಯಾ ಪ್ರಧಾನಿ ಬಣ್ಣನೆ

ಪಿಟಿಐ
Published 23 ಮೇ 2023, 10:50 IST
Last Updated 23 ಮೇ 2023, 10:50 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ಸಂಬಂಧವು ಪರಸ್ಪರ ನಂಬಿಕೆ ಮತ್ತು ಗೌರವವನ್ನು ಆಧರಿಸಿದೆ ಎಂದು ಪ್ರಧಾನಿ ಮೋದಿ ಮಂಗಳವಾರ ತಿಳಿಸಿದ್ದಾರೆ.

ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಭಾಗವಹಿಸಿದ ಮೋದಿ, ಅಲ್ಲಿನ ವಲಸಿಗ ಭಾರತೀಯರನ್ನು ಉದ್ದೇಶಿ ಮಾತನಾಡಿದರು.

ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ಅಲ್ಬನೀಸ್, "ಪ್ರಧಾನಿ ಮೋದಿಯೇ ಬಾಸ್" ಎಂದು ಹೇಳಿದ್ದಾರೆ.

ADVERTISEMENT

"ಸಿಡ್ನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ವಲಸಿಗರೊಂದಿಗೆ ಮಾತುಕತೆ ನಡೆಸಿದ್ದು ಸಂತೋಷವಾಗಿದೆ. ಭಾರತ-ಆಸ್ಟ್ರೇಲಿಯಾದ ದ್ವಿಪಕ್ಷೀಯ ಬಾಂಧವ್ಯದ ಕುರಿತು ಮಾತನಾಡಿದ ಮೋದಿ, ಎರಡೂ ದೇಶಗಳು ಪರಸ್ಪರ ನಂಬಿಕೆ ಮತ್ತು ಗೌರವವನ್ನು ಆಧರಿಸಿದೆ" ಎಂದರು

ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಬಾಂಧವ್ಯವನ್ನು ಶ್ಲಾಘಿಸಿದ ಅವರು, ಆಸೀಸ್ ಸ್ಪಿನ್ ಬೌಲರ್ ಶೇನ್ ವಾರ್ನ್ ನಿಧನರಾದಾಗ ಲಕ್ಷಾಂತರ ಭಾರತೀಯರು ದುಃಖಿತರಾಗಿದ್ದರು ಎಂದರಲ್ಲದೆ, ಸಿಡ್ನಿಯಲ್ಲಿನ ಒಂದು ಪ್ರದೇಶವನ್ನು 'ಲಿಟ್ಲ್ ಇಂಡಿಯಾ' ಎಂದು ಮರು ನಾಮಕರಣ ಮಾಡಿದರು.

ತನಗೆ ಬೆಂಬಲ ನೀಡಿದ ಅಲ್ಬನೀಸ್‌ಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ

ಮೋದಿ ಮತ್ತು ಆಸ್ಟ್ರೇಲಿಯದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಆಸ್ಟ್ರೇಲಿಯಾದ ಸಂಪ್ರದಾಯಕ ಕಲಾತಂಡಗಳು ಸಮಾರಂಭಕ್ಕೆ ಸ್ವಾಗತಿಸಿದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.