ADVERTISEMENT

56 ವರ್ಷಗಳ ಬಳಿಕ ಭೇಟಿ: ಗಯಾನಾದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 4:49 IST
Last Updated 20 ನವೆಂಬರ್ 2024, 4:49 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಅವರನ್ನು&nbsp;ಗಯಾನಾ ಅಧ್ಯಕ್ಷ ಮೊಹಮದ್ ಇರ್ಫಾನ್ ಅಲಿ ಆತ್ಮೀಯವಾಗಿ ಬರಮಾಡಿಕೊಂಡರು</p></div>

ಪ್ರಧಾನಿ ನರೇಂದ್ರ ಮೋದಿ ಅವರನ್ನು ಗಯಾನಾ ಅಧ್ಯಕ್ಷ ಮೊಹಮದ್ ಇರ್ಫಾನ್ ಅಲಿ ಆತ್ಮೀಯವಾಗಿ ಬರಮಾಡಿಕೊಂಡರು

   

–ಪಿಟಿಐ ಚಿತ್ರ

ಜಾರ್ಜ್‌ಟೌನ್‌ (ಗಯಾನಾ): ಗಯಾನಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ರಾಜಧಾನಿ ಜಾರ್ಜ್‌ಟೌನ್‌ನಲ್ಲಿ ಬುಧವಾರ ಬಂದಿಳಿದರು.

ADVERTISEMENT

50ಕ್ಕಿಂತ ಹೆಚ್ಚು ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಗಯಾನಾಕ್ಕೆ ನೀಡಿದ ಮೊದಲ ಭೇಟಿ ಇದು.

ಗಯಾನಾ ಅಧ್ಯಕ್ಷ ಮೊಹಮ್ಮದ್‌ ಇರ್ಫಾನ್‌ ಅಲಿ ಹಾಗೂ ಸಚಿವರು ಪ್ರಧಾನಿ ಮೋದಿ ಅವರನ್ನು ಇಲ್ಲಿನ ವಿಮಾನನಿಲ್ದಾಣದಲ್ಲಿ ಬರಮಾಡಿಕೊಂಡರು.  

‘ನನ್ನ ಈ ಭೇಟಿ ಭಾರತ ಮತ್ತು ಗಯಾನಾ ನಡುವಿನ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುವ ವಿಶ್ವಾಸ ಹೊಂದಿದ್ದೇನೆ’ ಎಂದು ಮೋದಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಗಯಾನಾದಲ್ಲಿ ನೆಲಸಿರುವ ಭಾರತ ಮೂಲದ ಜನರನ್ನು ಮೋದಿ ಅವರು ಭೇಟಿಯಾಗಲಿದ್ದಾರೆ. ಗಯಾನಾದಲ್ಲಿ ಅಂದಾಜು 3.20 ಲಕ್ಷದಷ್ಟು ಭಾರತ ಮೂಲದವರಿದ್ದು, ಇವರು 185 ವರ್ಷಗಳಿಗೂ ಹಿಂದೆ ಇಲ್ಲಿಗೆ ವಲಸೆ ಬಂದವರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 

ಇದೇ ವೇಳೆ, ಮೋದಿ ಅವರು ಭಾರತ ಮತ್ತು ಕೆರಿಬಿಯನ್‌ ರಾಷ್ಟ್ರಗಳ ಶೃಂಗಸಭೆಯಲ್ಲಿ ಕೂಡ ಪಾಲ್ಗೊಳ್ಳುವರು.

ಮೋದಿಗೆ ಡೊಮಿನಿಕಾ ದೇಶದ ಗೌರವ

ಡೊಮಿನಿಕಾ ದೇಶವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಅತ್ಯುನ್ನತ ನಾಗರಿಕ ಗೌರವ ‘ಡೊಮಿನಿಕಾ ಅವಾರ್ಡ್‌ ಆಫ್ ಆನರ್’ ನೀಡಲು ನಿರ್ಧರಿಸಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಕೋವಿಡ್‌– 19 ಸಾಂಕ್ರಾಮಿಕದ ಅವಧಿಯಲ್ಲಿ ಮೋದಿ ಅವರು ಡೊಮಿನಿಕಾಕ್ಕೆ ನೀಡಿದ ನೆರವು ಮತ್ತು ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸುವಲ್ಲಿ ಅವರು ತೋರಿದ ಬದ್ಧತೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ಜಾರ್ಜ್‌ಟೌನ್‌ನಲ್ಲಿ ನಡೆಯಲಿರುವ ಭಾರತ- ಕೆರಿಕಮ್ (ಕೆರಿಬಿಯನ್‌ ಕಮ್ಯುನಿಟಿ) ಶೃಂಗಸಭೆಯಲ್ಲಿ ಡೊಮಿನಿಕಾ ದ್ವೀಪ ರಾಷ್ಟ್ರದ ಅಧ್ಯಕ್ಷೆ ಸಿಲ್ವೆನಿ ಬರ್ಟನ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಡೊಮಿನಿಕಾ ಪ್ರಧಾನ ಮಂತ್ರಿಯವರ ಕಚೇರಿಯ ಹೇಳಿಕೆ ತಿಳಿಸಿದೆ.

‘ಪ್ರಧಾನಿ ಮೋದಿ ಅವರು 2021ರ ಫೆಬ್ರುವರಿಯಲ್ಲಿ ಡೊಮಿನಿಕಾಕ್ಕೆ 70,000 ಡೋಸ್ ಅಸ್ಟ್ರಾಜೆನೆಕಾ ಕೋವಿಡ್‌–19 ಲಸಿಕೆ ಪೂರೈಸಿದ್ದರು. ಈ ಉದಾರ ಕೊಡುಗೆಯು, ಡೊಮಿನಿಕಾಕ್ಕೆ ಕೆರಿಬಿಯನ್‌ನಲ್ಲಿರುವ ತನ್ನ ನೆರೆಯ ದೇಶಗಳಿಗೆ ನೆರವು ನೀಡಲು ಅನುವು ಮಾಡಿಕೊಟ್ಟಿತ್ತು’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.