ADVERTISEMENT

ಹಿರೋಷಿಮಾದಲ್ಲಿ ಗಾಂಧೀಜಿ ಪುತ್ಥಳಿ ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

ಐಎಎನ್ಎಸ್
Published 20 ಮೇ 2023, 4:50 IST
Last Updated 20 ಮೇ 2023, 4:50 IST
   

ಹಿರೋಷಿಮಾ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಜಪಾನ್‌ನ ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿಯವರ ಪುತ್ಥಳಿಯನ್ನು ಅನಾವರಣಗೊಳಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಮೋದಿ, ‘ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿಯವರ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು. ಹಿರೋಷಿಮಾದಲ್ಲಿನ ಈ ಪುತ್ಥಳಿ ಜಗತ್ತಿಗೆ ಬಹಳ ಮುಖ್ಯವಾದ ಸಂದೇಶವನ್ನು ನೀಡುತ್ತದೆ. ಗಾಂಧಿಯವರ ಶಾಂತಿ ಮತ್ತು ಸೌಹಾರ್ದತೆಯ ಆದರ್ಶಗಳು ಜಾಗತಿಕವಾಗಿ ಪ್ರತಿಧ್ವನಿಸುತ್ತವೆ. ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತವೆ’ ಎಂದು ಹೇಳಿದ್ದಾರೆ.

ಮಹಾತ್ಮಾ ಗಾಂಧಿಯವರ ಪುತ್ಥಳಿಗೆ ನಮಿಸುತ್ತಿರುವ ಚಿತ್ರವನ್ನು ಟ್ವೀಟ್‌ನೊಂದಿಗೆ ಅವರು ಹಂಚಿಕೊಂಡಿದ್ದಾರೆ.

ADVERTISEMENT

ಜಿ7 ಶೃಂಗಸಭೆಗೆಂದು ಹಿರೋಷಿಮಾಗೆ ತೆರಳಿರುವ ಪ್ರಧಾನಿ ಅವರು ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಅವರೊಂದಿಗೂ ಶನಿವಾರ ಸಭೆ ನಡೆಸಿದರು.

‘ಇಂದು ಬೆಳಿಗ್ಗೆ ಜಪಾನ್‌ ಪ್ರಧಾನ ಮಂತ್ರಿ ಕಿಶಿದಾ ಅವರೊಂದಿಗೆ ಸಭೆ ನಡೆಸಲಾಯಿತು. ಭಾರತ-ಜಪಾನ್ ಸಂಬಂಧಗಳನ್ನು ಪರಾಮರ್ಶಿಸಲಾಯಿತು. ಭಾರತದ ಜಿ -20 ಅಧ್ಯಕ್ಷತೆ ಮತ್ತು ಜಪಾನ್‌ನ ಜಿ -7 ಅಧ್ಯಕ್ಷತೆಯ ಕೇಂದ್ರೀಕೃತ ಕ್ಷೇತ್ರಗಳ ಕುರಿತು ಚರ್ಚಿಸಲಾಯಿತು’ ಎಂದು ಟ್ವೀಟ್‌ ಮಾಡಿ ಹೇಳಿದ್ದಾರೆ.

ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಶುಕ್ರವಾರ ಜಪಾನ್‌ನ ಹಿರೋಷಿಮಾಕ್ಕೆ ತೆರಳಿದ್ದು, ಅಲ್ಲಿ ಅವರು ವಿಶ್ವದ ಹಲವು ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುತ್ತಿದ್ದಾರೆ.

ಜಪಾನ್‌ ಪ್ರಧಾನ ಮಂತ್ರಿ ಫುಮಿಯೊ ಕಿಶಿದಾ ಅವರೊಂದಿಗೆ ನರೇಂದ್ರ ಮೋದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.