ಬೀಜಿಂಗ್: ಚೀನಾದ ದಕ್ಷಿಣ ಭಾಗದ ಗ್ವಾಂಗ್‌ಜೌ ಪ್ರಾಂತ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಹೊಸದಾಗಿ 15 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಹಾಂಕಾಂಗ್ ಸಮೀಪದ ಗ್ವಾಂಗ್‌ಡಂಗ್ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಠಿಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.
ದೇಶದ ಕೆಲವು ಭಾಗಗಳಲ್ಲಿ ಈ ಹಿಂದೆ ಕಾಣಿಸಿದ ಕೊರೊನಾ ವೈರಸ್‌ಗಳಿಗಿಂತ ಭಿನ್ನ ರೂಪದ, ವೇಗವಾಗಿ ಪ್ರಸರಣಗೊಳ್ಳುವ ತಳಿ ಇದು ಎಂದು ವಿಶ್ಲೇಷಿಸಲಾಗುತ್ತಿದೆ.
‘ರೋಗಿಗಳಲ್ಲಿ ವೈರಸ್ ಪ್ರಮಾಣ ಕಳೆದ ಬಾರಿಗಿಂತ ಅಧಿಕ ಇರುವುದು ಗಮನಕ್ಕೆ ಬಂದಿದೆ. ಇದರಿಂದ ಸೋಂಕು ಬೇಗ ಹರಡುತ್ತಿದೆ’ ಎಂದು ಗ್ವಾಂಗ್‌ಜೌ ಆಸ್ಪತ್ರೆಯೊಂದರ ಸಾಂಕ್ರಾಮಿಕ ರೋಗ ವಿಭಾಗದ ತಜ್ಞರನ್ನೊಬ್ಬರನ್ನು ಉಲ್ಲೇಖಿಸಿ ‘ಕೈಕ್ಸಿನ್’ ನಿಯತಕಾಲಿಕ ವರದಿಮಾಡಿದೆ.ಗ್ವಾಂಗ್‌ಡಂಗ್‌ನಲ್ಲಿ ಗುರುವಾರ ಒಂದೇ ದಿನ 50 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಇದನ್ನೂ ಓದಿ... ಚೀನಾ: ಹೊಸ ತಲೆಮಾರಿನ ಹವಾಮಾನ ಉಪಗ್ರಹ ಯಶಸ್ವಿ ಉಡಾವಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.