ADVERTISEMENT

ಪಪುವಾ ನ್ಯೂಗಿನಿಯಲ್ಲಿ ಭೂ ಕುಸಿತ: 100ಕ್ಕೂ ಹೆಚ್ಚು ಮಂದಿ ಸಾವು

ಏಜೆನ್ಸೀಸ್
Published 24 ಮೇ 2024, 5:37 IST
Last Updated 24 ಮೇ 2024, 5:37 IST
<div class="paragraphs"><p>ಎಂಗಾ ಪ್ರಾಂತ್ಯದ ಗೂಗಲ್‌ ನಕ್ಷೆ</p></div>

ಎಂಗಾ ಪ್ರಾಂತ್ಯದ ಗೂಗಲ್‌ ನಕ್ಷೆ

   

ಮೆಲ್ಬರ್ನ್: ಪಪುವಾ ನ್ಯೂಗಿನಿಯಲ್ಲಿ ಶುಕ್ರವಾರ ಸಂಭವಿಸಿದ ಭೂ ಕುಸಿತದಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಆಸ್ಟ್ರೇಲಿಯಾ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ (ಎಬಿಸಿ) ವರದಿ ಮಾಡಿದೆ.

ಎಂಗಾ ಪ್ರಾಂತ್ಯದ ಕಾವೊಕಲಮ್‌ ಗ್ರಾಮದಲ್ಲಿ ಬೆಳಿಗ್ಗೆ 3ಕ್ಕೆ ಭೂ ಕುಸಿತ ಸಂಭವಿಸಿದೆ. ದಕ್ಷಿಣ ಪೆಸಿಫಿಕ್‌ನ ದ್ವೀಪ ರಾಷ್ಟ್ರವಾಗಿರುವ ಪಪುವಾ ನ್ಯೂಗಿನಿಯ ರಾಜಧಾನಿ ಪೋರ್ಟ್‌ ಮೊರೆಸ್ಬಿಯಿಂದ ಸುಮಾರು 600 ಕಿ.ಮೀ ದೂರದಲ್ಲಿ ಈ ಪ್ರಾಂತ್ಯ ಇದೆ ಎಂದು ಎಬಿಸಿ ವರದಿ ಮಾಡಿದೆ.

ADVERTISEMENT

ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿರಬಹುದು ಎಂದು ಅಲ್ಲಿನ ನಿವಾಸಿಗಳು ಹೇಳೀದ್ದಾರೆ. ಆದರೆ, ಅಧಿಕಾರಿಗಳು ಅದನ್ನು ಖಚಿತಪಡಿಸಿಲ್ಲ. ನೆಲದಲ್ಲಿ ಹೂತುಹೋಗಿರುವ ಶವಗಳನ್ನು ಜನರು ಹೊರತೆಗೆಯುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

800ಕ್ಕೂ ಹೆಚ್ಚು ಭಾಷೆ ಮಾತನಾಡುವ ಜನರಿರುವ ಪಪುವಾ ನ್ಯೂಗಿನಿ, ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಇಲ್ಲಿ 1 ಕೋಟಿಗೂ ಹೆಚ್ಚು ಜನರು ನೆಲೆಸಿದ್ದಾರೆ. 2.7 ಕೋಟಿ ಜನಸಂಖ್ಯೆ ಹೊಂದಿರುವ ಆಸ್ಟ್ರೇಲಿಯಾವನ್ನು ಬಿಟ್ಟರೆ, ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದಕ್ಷಿಣ ಪೆಸಿಫಿಕ್ ರಾಷ್ಟ್ರ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.