ಕೀವ್: ರಷ್ಯಾದ ಆಕ್ರಮಣದಿಂದಾಗಿ 40 ಕ್ಕೂ ಹೆಚ್ಚು ಉಕ್ರೇನಿನ್ ಸೈನಿಕರು ಮತ್ತು ಸುಮಾರು 10 ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಸಹಾಯಕ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘40 ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ. ಸುಮಾರು 10 ನಾಗರಿಕರು ಮೃತಪಟ್ಟಿದ್ದರೆ, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಗೊತ್ತಾಗಿದೆ’ ಎಂದು ಅಧ್ಯಕ್ಷೀಯ ಆಡಳಿತದ ಸಹಾಯಕ ಒಲೆಕ್ಸಿ ಅರೆಸ್ಟೋವಿಚ್ ಸುದ್ದಿಗಾರರಿಗೆ ತಿಳಿಸಿದರು.
ಎರಡು ಬಂಡುಕೋರ ಪ್ರದೇಶಗಳಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿರುವ ರಷ್ಯಾದ 50 ಆಕ್ರಮಣಕಾರರನ್ನು ಹೊಡೆದುರಳಿಸಿರುವುದಾಗಿ ಉಕ್ರೇನ್ ಹೇಳಿದೆ.
ಮತ್ತೊಂದೆಡೆ, ಉಕ್ರೇನಿನಕ್ಷಿಪಣಿ ದಾಳಿಯಿಂದಾಗಿಅಜೋವ್ ಸಮುದ್ರದಲ್ಲಿ ರಷ್ಯಾದ ಎರಡು ನಾಗರಿಕ ಸರಕು ಹಡಗುಗಳು ಹಾನಿಗೀಡಾಗಿವೆ. ಹಲವುಸಾವು ನೋವುಗಳೂ ಸಂಭವಿಸಿವೆ ಎಂದು ರಷ್ಯಾ ‘ರಾಷ್ಟ್ರೀಯ ಭದ್ರತಾ ಸೇವೆ’ಯ ಮಾಹಿತಿ ಉಲ್ಲೇಖಿಸಿ ರಷ್ಯಾದ ಸುದ್ದಿ ಸಂಸ್ಥೆ ‘ಟಾಸ್’ ಸುದ್ದಿ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.