ಅಥೆನ್ಸ್ (ಎಪಿ): ಗ್ರೀಸ್‌ನ ವಿವಿಧೆಡೆ ಸಂಭವಿಸಿರುವ ಕಾಳ್ಗಿಚ್ಚನ್ನು ನಂದಿಸಲು 600ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಭಾನುವಾರ ಹರಸಾಹಸಪಟ್ಟರು.
ಗ್ರೀಸ್‌ನ ಮೂರು ಕಡೆ ಹಬ್ಬಿರುವ ಬೆಂಕಿಯನ್ನು ಆರಿಸಲು ಯುರೋಪ್‌ನ ವಿವಿಧ ದೇಶಗಳ ಬೆಂಬಲದೊಂದಿಗೆ, ವಿಮಾನ ಮತ್ತು ಹೆಲಿಕಾಪ್ಟರ್ ಮೂಲಕ ನೀರು ಸಿಂಪಡಣೆ ಮಾಡಿ ಶ್ರಮಿಸಿದರು.
ದೇಶದ ಈಶಾನ್ಯ ಪ್ರಾಂತ್ಯಗಳಾದ ಎವ್ರೋಸ್ ಮತ್ತು ಅಲೆಕ್ಸಾಂಡ್ರೋಪೊಲೀಸ್‌ನಲ್ಲಿ 9 ದಿನಗಳಿಂದ ಕಾಳ್ಗಿಚ್ಚು ವ್ಯಾಪಿಸಿದ್ದು, 20 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ದುರಂತದಿಂದ ಭಾರಿ ಪ್ರಮಾಣದ ಅರಣ್ಯ ಪ್ರದೇಶ ನಾಶವಾಗಿದ್ದು, ಅನೇಕ ಮನೆಗಳಿಗೆ ಹಾನಿಯಾಗಿದೆ.
‘ಭಾನುವಾರದಂದು 295 ಅಗ್ನಿ ಶಾಮಕ ಸಿಬ್ಬಂದಿ, ಏಳು ವಿಮಾನಗಳು ಹಾಗೂ ಐದು ಹೆಲಿಕಾಪ್ಟರ್‌ಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು’ ಎಂದು ಅಗ್ನಿ ಶಾಮಕದಳ ಇಲಾಖೆ ಹೇಳಿದೆ.
ಕಾಳ್ಗಿಚ್ಚಿನಿಂದಾಗಿ ಸುಮಾರು 77 ಸಾವಿರ ಹೆಕ್ಟೇರ್‌ನಷ್ಟು ಭೂಪ್ರದೇಶ ಹಾನಿಗೀಡಾಗಿದೆ ಎಂದು ಐರೋಪ್ಯ ಒಕ್ಕೂಟದ ಕೋಪರ್ನಿಕಸ್ ತುರ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.