ADVERTISEMENT

ಕಿಮ್‌–ಪುಟಿನ್‌ ಭೇಟಿ ಶೀಘ್ರ

ಎಪಿ
Published 11 ಸೆಪ್ಟೆಂಬರ್ 2023, 14:39 IST
Last Updated 11 ಸೆಪ್ಟೆಂಬರ್ 2023, 14:39 IST
<div class="paragraphs"><p> ಕಿಮ್‌</p></div>

ಕಿಮ್‌

   

ಸೋಲ್: ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್‌ ಉನ್‌ ಅವರು ಶೀಘ್ರದಲ್ಲಿಯೇ ರಷ್ಯಾಗೆ ಭೇಟಿ ನೀಡಲಿದ್ದು, ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ರಷ್ಯಾ ಮತ್ತು ಉತ್ತರ ಕೊರಿಯಾ ಭೇಟಿಯನ್ನು ದೃಢಪಡಿಸಿವೆ.

ಉಭಯ ಮುಖಂಡರ ಉದ್ದೇಶಿತ ಭೇಟಿ ಪಶ್ಚಿಮ ರಾಷ್ಟ್ರಗಳಲ್ಲಿ ಕುತೂಹಲ ಮೂಡಿಸಿದ್ದು, ಈಗ ನಡೆದಿರುವ ಉಕ್ರೇನ್‌ ಜೊತೆಗಿನ ಯುದ್ಧದಲ್ಲಿ ರಷ್ಯಾಗೆ ಹೆಚ್ಚಿನ ಶಸ್ತ್ರಾಸ್ತ್ರ ಬಲ ನೀಡಬಹುದು ಎಂದು ಹೇಳಲಾಗಿದೆ. 

ADVERTISEMENT

ರಷ್ಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಕುರಿತು ಸಂಕ್ಷಿಪ್ತ ಮಾಹಿತಿ ಪೋಸ್ಟ್ ಮಾಡಲಾಗಿದೆ. ಪುಟಿನ್‌ ಅವರ ಆಹ್ವಾನದ ಮೇರೆಗೆ ಕಿಮ್‌ ‘ಬರುವ ದಿನಗಳಲ್ಲಿ’ ಭೇಟಿ ನೀಡುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.