ADVERTISEMENT

ಕೊಲಂಬಿಯಾದಲ್ಲಿ ಭೂ ಕುಸಿತ: 14 ಸಾವು

ಏಜೆನ್ಸೀಸ್
Published 9 ಫೆಬ್ರುವರಿ 2022, 12:09 IST
Last Updated 9 ಫೆಬ್ರುವರಿ 2022, 12:09 IST
ಭಾರಿ ಮಳೆಗೆ ಕೊಲಂಬಿಯಾದಲ್ಲಿ ಉಂಟಾದ ಭೂ ಕುಸಿತದಿಂದ ಅಪಾಯಕ್ಕೆ ಸಿಲುಕಿರುವವರನ್ನು ಪೊಲೀಸರು ಮತ್ತು ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದರು  –ಎಪಿ/ಪಿಟಿಐ ಚಿತ್ರ
ಭಾರಿ ಮಳೆಗೆ ಕೊಲಂಬಿಯಾದಲ್ಲಿ ಉಂಟಾದ ಭೂ ಕುಸಿತದಿಂದ ಅಪಾಯಕ್ಕೆ ಸಿಲುಕಿರುವವರನ್ನು ಪೊಲೀಸರು ಮತ್ತು ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದರು  –ಎಪಿ/ಪಿಟಿಐ ಚಿತ್ರ   

ಬೊಗೋಟಾ: ಭಾರೀ ಮಳೆಗೆ ಕೊಲಂಬಿಯಾದ ಪಶ್ಚಿಮ ಭಾಗದ ಜನವಸತಿ ಪ್ರದೇಶದಲ್ಲಿ ಮಂಗಳವಾರ ಉಂಟಾದ ಭೂ ಕುಸಿತದಿಂದ 14 ಜನ ಮೃತಪಟ್ಟಿದ್ದು, 35 ಮಂದಿ ಗಾಯಗೊಂಡಿದ್ದಾರೆ. ನಾಪತ್ತೆಯಾದ ಒಬ್ಬ ವ್ಯಕ್ತಿಗೆಹುಡುಕಾಟ ನಡೆಸಲಾಗುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಸಾವಿನ ಸಂಖ್ಯೆದೃಢಪಡಿಸಿರುವ ಪೆರೇರಾ ಮೇಯರ್‌ ಕಾರ್ಲೋಸ್‌ ಮಾಯಾ, ಈ ಪ್ರದೇಶದಲ್ಲಿ ಭೂ ಕುಸಿತ ಮುಂದುವರಿದಿದೆ. ಸಾವು–ನೋವಿನಿಂದ ತಪ್ಪಿಸಿಕೊಳ್ಳಲು ಇಲ್ಲಿನ ಜನರು ಸ್ಥಳಾಂತರ ಆಗಬೇಕೆಂದು ಮನವಿ ಮಾಡಿದ್ದಾರೆ. ಮರದಿಂದ ನಿರ್ಮಿಸಿರುವ ಮನೆಗಳಿಗೆ ಹೆಚ್ಚಿನ ಹಾನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT