ಬೆಂಗಳೂರು:ಮ್ಯಾನ್ಮಾರ್‌ನಲ್ಲಿ ಕಿರುಕುಳಅನುಭವಿಸುತ್ತಿರುವರೋಹಿಂಗ್ಯಾಮುಸ್ಲಿಮರನ್ನು ರಕ್ಷಿಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯವುಮ್ಯಾನ್ಮಾರ್ ಸರ್ಕಾರಕ್ಕೆತಾಕೀತುಮಾಡಿದೆ. ವಿಶ್ವಸಂಸ್ಥೆ ಅಂಗವಾಗಿರುವ ಅಂತರರಾಷ್ಟ್ರೀಯ ನ್ಯಾಯಾಲಯವುಮ್ಯಾನ್ಮಾರ್‌ನಲ್ಲಿ ನಡೆಯತ್ತಿರುವರೋಹಿಂಗ್ಯಾಜನರ ಜನಾಂಗೀಯ ಹತ್ಯೆಯ ಬಗ್ಗೆ ಪ್ರಾಥಮಿಕತನಿಖೆನಡೆಸಲಿದೆ.
ಮ್ಯಾನ್ಮಾರ್‌ನಲ್ಲಿರೋಹಿಂಗ್ಯಾಮುಸಲ್ಮಾನರುಅಂತ್ಯಂತದುರ್ಬಲ ಜನಾಂಗ ಎಂದು ಅಂತರರಾಷ್ಟ್ರೀಯ ನ್ಯಾಯಾಲಯದ ಅಧ್ಯಕ್ಷ,ನ್ಯಾಯಮೂರ್ತಿಅಬ್ದುಲ್‌ಕ್ವಾರಿ ಅಹ್ಮದ್ಯುಸುಫ್ಅವರು ಹೇಳಿದ್ದಾರೆ. ಅಂತರರಾಷ್ಟ್ರೀಯ ಕಾನೂನು ಅನುಸರಿಸುವಂತೆಮ್ಯಾನ್ಮಾರ್ ಸರ್ಕಾರಕ್ಕೆ ನ್ಯಾಯಾಲಯವು ತಾಕೀತು ಮಾಡಿದೆ.
ನಾಲ್ಕು ತಿಂಗಳಲ್ಲಿರೋಹಿಂಗ್ಯಾಜನರ ಸುರಕ್ಷತೆಗಾಗಿಮ್ಯಾನ್ಮಾರ್‌ಸರ್ಕಾರಕೈಗೊಂಡ ಕ್ರಮಗಳ ವರದಿಯನ್ನುಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಮ್ಯಾನ್ಮಾರ್ ಸರ್ಕಾರಕ್ಕೆ ಆದೇಶಿಸಿದೆ.
ರೋಹಿಂಗ್ಯಾಮುಸ್ಲಿಂವಿರುದ್ಧಮ್ಯಾನ್ಮಾರ್‌ನಲ್ಲಿ ನರಮೇಧನಡೆಯುತ್ತಿದೆಎಂದು ಆರೋಪಿಸಿಗಾಂಬಿಯಾ ದೇಶವುಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.