ಟೋಕಿಯೊ: ಜಪಾನ್, ಅಮೆರಿಕ ಮತ್ತು ರಷ್ಯಾ ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ತೆಗೆದು ಹಾಕುವುದಕ್ಕೆ ಕ್ರಮಕೈಗೊಳ್ಳುವಂತೆ ನಾಗಾಸಾಕಿಯ ಮೇಯರ್ ಟೊಮಿಹಿಸಾ ತೌ ಒತ್ತಾಯಿಸಿದರು.
ನಾಗಸಾಕಿ ಮೇಲೆ ಅಮೆರಿಕದ ಪರಮಾಣು ಬಾಂಬ್ ಸ್ಪೋಟದ ದಾಳಿಗೆ 76 ತುಂಬಿರುವ ಹಿನ್ನೆಲೆಯಲ್ಲಿ ಸೋಮವಾರ ನಾಗಾಸಾಕಿ ಶಾಂತಿ ಉದ್ಯಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಶಾನ್ಯ ಏಷ್ಯಾ ವಲಯವನ್ನು ಪರಮಾಣು ಮುಕ್ತವಾಗಿಸಲು ಜಪಾನ್ ಮುಂದಾಳತ್ವ ವಹಿಸಬೇಕು ಎಂದು ಹೇಳಿದ ಅವರು, ಈ ಮೂಲಕ ಜಪಾನ್ ರಾಷ್ಟ್ರವನ್ನು ಅಮೆರಿಕದ ಅಣ್ವಸ್ತ್ರ ವ್ಯಾಪ್ತಿಯಿಂದ ಹೊರತರಲು ಕ್ರಮ ಕೈಗೊಳ್ಳಬೇಕು‘ ಎಂದು ಅವರು ಒತ್ತಾಯಿಸಿದರು. ಮಿತ್ರರಾಷ್ಟ್ರಗಳನ್ನು ರಕ್ಷಿಸಲು ತನ್ನದೇ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಕುರಿತು ಅಮೆರಿಕ ಈ ಹಿಂದೆ ನೀಡಿದ ಭರವಸೆಯನ್ನು ಉಲ್ಲೇಖಿಸಿ ಮೇಯರ್ ಅವರು ಈ ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.