ADVERTISEMENT

ನೇಪಾಳದ ನೂತನ ವಿದೇಶಾಂಗ ಸಚಿವರಾಗಿ ನಾರಾಯಣ್ ಖಡ್ಕಾ ನೇಮಕ

ಪಿಟಿಐ
Published 22 ಸೆಪ್ಟೆಂಬರ್ 2021, 10:12 IST
Last Updated 22 ಸೆಪ್ಟೆಂಬರ್ 2021, 10:12 IST
ವಿದ್ಯಾದೇವಿ ಭಂಡಾರಿ
ವಿದ್ಯಾದೇವಿ ಭಂಡಾರಿ   

ಕಠ್ಮಂಡು: ಹಿರಿಯ ಸಂಸದ ನಾರಾಯಣ್ ಖಡ್ಕಾ ಅವರನ್ನು ನೇಪಾಳದ ನೂತನ ವಿದೇಶಾಂಗ ಸಚಿವರನ್ನಾಗಿ ನೇಮಕ ಮಾಡಲಾಗಿದೆ.

ಪ್ರಧಾನಿ ಶೇರ್ ಬಹಾದ್ದೂರ್ ದೇವುಬಾ ನೇತೃತ್ವದ ಸರ್ಕಾರ ಮಾಡಿದ ಶಿಫಾರಸಿನಂತೆ, ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ಖಡ್ಕಾ ಅವರನ್ನು ನೇಮಕ ಮಾಡಿದ್ದಾರೆ. ಈ ವರೆಗೆ ವಿದೇಶಾಂಗ ಖಾತೆ ಪ್ರಧಾನಿ ಬಳಿಯೇ ಇತ್ತು.

ಖಡ್ಕಾ ಅವರು ಪುಣೆ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್‌.ಡಿ ಪಡೆದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.