ವಾಷಿಂಗ್ಟನ್: ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತದ ಸಿಖ್ಖರ ಸಮುದಾಯದ ಪ್ರತಿನಿಧಿಗಳು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ವಿಸ್ಕಾನ್ಸಿನ್‌ನ ಹೆಸರಾಂತ ಸಿಖ್ ಮುಖಂಡ ದರ್ಶನ್ ಸಿಂಗ್ ಧಲಿವಾಲ್ ಸಹ ನಿಯೋಗದಲ್ಲಿ ಇದ್ದರು.
'ನಾವು ತುಂಬಾ ಸಂತೋಷಗೊಂಡಿದ್ದೇವೆ. ನ್ಯೂಯಾರ್ಕ್‌ನಲ್ಲಿ ಪ್ರಧಾನಿ ಜತೆಗಿನ ಸಭೆಯ ಬಳಿಕ ಧನಾತ್ಮಕ ಭಾವನೆ ಮೂಡಿದೆ. ಸಿಖ್ ಸಾಂಪ್ರದಾಯದಂತೆ ನಾವು ಪ್ರಧಾನಿ ಅವರನ್ನು ಸ್ವಾಗತಿಸಿದ್ದೇವೆ' ಎಂದು ಅಮೆರಿಕದ ಸಿಖ್ ಸಮುದಾಯದ ಜಸ್‌ದೀಪ್ ಸಿಂಗ್ ಜಸ್ಸಿ ತಿಳಿಸಿದ್ದಾರೆ.
'ನಾವು ಫಲಪ್ರದವಾದ ಚರ್ಚೆ ನಡೆಸಿದ್ದೇವೆ. ಪ್ರಧಾನಿಯವರು ಸಿಖ್ ಸಮುದಾಯಕ್ಕೆ ಅನೇಕ ಕೆಲಸಗಳನ್ನು ಮಾಡಿದ್ದಾರೆ' ಎಂದು ಅವರು ಉಲ್ಲೇಖಿಸಿದ್ದಾರೆ.
'ಸಿಖ್ ಸಮುದಾಯಕ್ಕೆ ಪ್ರಧಾನಿ ಮೋದಿ ಮಾಡಿದ ಕೆಲಸ ಕಾರ್ಯಗಳಿಗಾಗಿ ಧನ್ಯವಾದಗಳನ್ನು ಸಲ್ಲಿಸಿದ್ದೇವೆ. ಶೀಘ್ರದಲ್ಲೇ ಸಿಖ್ಖರ ಸಮಸ್ಯೆಗಳ ಕುರಿತು ಮತ್ತೊಂದು ನಿಯೋಗ ಭಾರತಕ್ಕೆ ತೆರಳಿ ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಲಿದ್ದೇವೆ' ಎಂದು ಅವರು ತಿಳಿಸಿದ್ದಾರೆ.
'13,000ಕ್ಕೂ ಹೆಚ್ಚು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದರು. ಅವರೆಲ್ಲರೂ ಭಾರತದ ಪ್ರಗತಿಯ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಾರೆ' ಎಂದು ಅವರು ತಿಳಿಸಿದ್ದಾರೆ.
ಮೂರು ದಿನಗಳ ಅಮೆರಿಕ ಪ್ರವಾಸದ ಬಳಿಕ ಪ್ರಧಾನಿ ಮೋದಿ ತವರಿಗೆ ಹಿಂದಿರುಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.