ADVERTISEMENT

ರಾಕೆಟ್‌ ಪತನ: ಚೀನಾ ವಿರುದ್ಧ ನಾಸಾ ಕಿಡಿ

ಪಿಟಿಐ
Published 9 ಮೇ 2021, 11:55 IST
Last Updated 9 ಮೇ 2021, 11:55 IST
ನಾಸಾ
ನಾಸಾ   

ವಾಷಿಂಗ್ಟನ್‌: ಅನಿಯಂತ್ರಿತ ರಾಕೆಟ್‌ವೊಂದು ಭಗ್ನಗೊಂಡು, ಅವಶೇಷಗಳು ಹಿಂದೂ ಮಹಾಸಾಗರದಲ್ಲಿ ಬಿದ್ದ ಘಟನೆಗೆ ಸಂಬಂಧಿಸಿದಂತೆ ಚೀನಾ ವಿರುದ್ಧ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಭಾನುವಾರ ವಾಗ್ದಾಳಿ ನಡೆಸಿದೆ.

‘ತಾನು ಉಡಾವಣೆ ಮಾಡಿದ ರಾಕೆಟ್‌ ಭಗ್ನಗೊಂಡಿದೆ. ಬಾಹ್ಯಾಕಾಶ ಅವಶೇಷಗಳ ನಿರ್ವಹಣೆ ವಿಷಯದಲ್ಲಿ ಚೀನಾ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಲ್ಲಿ ವಿಫಲವಾಗಿದೆ’ ಎಂದು ನಾಸಾದ ಆಡಳಿತಾಧಿಕಾರಿ ಬಿಲ್‌ ನೆಲ್ಸನ್ ಹೇಳಿದರು.

ಚೀನಾದ ಲಾಂಗ್ ಮಾರ್ಚ್ 5 ಬಿ ರಾಕೆಟ್‌ನ ಭಗ್ನಾವಶೇಷವು ಭಾನುವಾರ ಭೂಮಿಯ ವಾತಾವರಣವನ್ನು ಪ್ರವೇಶಿಸಿದ್ದು, ಇದು ಮಾಲ್ಡೀವ್ಸ್‌ಗೆ ಸಮೀಪ ಹಿಂದೂ ಮಹಾಸಾಗರದಲ್ಲಿ ಬಿದ್ದಿದೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ

ADVERTISEMENT

‘ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ದೇಶಗಳು ರಾಕೆಟ್‌, ಗಗನನೌಕೆಗಳ ನಿರ್ವಹಣೆ, ಅವುಗಳು ವಿಫಲಗೊಂಡು ಭೂಮಿಯತ್ತ ಮರಳುವ ವೇಳೆ ಸಾಕಷ್ಟು ಮುಂಜಾಗ್ರತೆ ತೆಗೆದುಕೊಳ್ಳಬೇಕು. ಇಂಥ ಸಂದರ್ಭಗಳಲ್ಲಿನ ಹಾನಿ ಅತ್ಯಂತ ಕಡಿಮೆ ಪ್ರಮಾಣದದಲ್ಲಿರುವಂತೆ ಕ್ರಮ ಕೈಗೊಳ್ಳುವುದು ಮುಖ್ಯ’ ಎಂದು ಅವರು ಹೇಳಿದರು.

‘ಅಂತರಿಕ್ಷದ ಸುರಕ್ಷತೆ, ಸ್ಥಿರತೆ ಹಾಗೂ ಸುದೀರ್ಘ ಕಾಲದ ವರೆಗೆ ಸುಸ್ಥಿರತೆಯನ್ನು ಖಾತರಿಪಡಿಸುವುದು ಪ್ರತಿಯೊಂದು ದೇಶದ ಜವಾಬ್ದಾರಿಯಾಗಿರಬೇಕು’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.