ADVERTISEMENT

ಮಂಗಳಯಾನ: ಭಾರತ, ಚೀನಾದೊಂದಿಗೆ ಮಾಹಿತಿ ಹಂಚಿಕೊಂಡ ನಾಸಾ

ಪಿಟಿಐ
Published 31 ಮಾರ್ಚ್ 2021, 12:09 IST
Last Updated 31 ಮಾರ್ಚ್ 2021, 12:09 IST
ನಾಸಾ
ನಾಸಾ   

ಬೀಜಿಂಗ್‌: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ತನ್ನ ಮಂಗಳಯಾನ ಕಾರ್ಯಕ್ರಮದ ಮಾಹಿತಿಯನ್ನು ಭಾರತ, ಚೀನಾ, ಯುಎಇ ಹಾಗೂ ಐರೋಪ್ಯ ರಾಷ್ಟ್ರಗಳಲ್ಲಿನ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ವಿನಿಮಯ ಮಾಡಿಕೊಂಡಿದೆ.

ಇತರ ದೇಶಗಳು ಸಹ ಹಲವಾರು ಗಗನನೌಕೆಗಳನ್ನು ಉಡಾವಣೆ ಮಾಡಿವೆ. ಮಂಗಳಯಾನ ಕಾರ್ಯಕ್ರಮದ ಭಾಗವಾಗಿ ತಾನು ಉಡಾವಣೆ ಮಾಡಿರುವ ಗಗನನೌಕೆ ಹಾಗೂ ಇತರ ರಾಷ್ಟ್ರಗಳ ಗಗನನೌಕೆ ನಡುವೆ ಘರ್ಷಣೆಯಾಗಬಾರದು ಎಂಬ ಉದ್ದೇಶದಿಂದ ನಾಸಾ ಮಾಹಿತಿ ವಿನಿಮಯ ಮಾಡಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೊ, ಮಂಗಳಯಾನ ಕಾರ್ಯಕ್ರಮದಡಿ ಉಡಾವಣೆ ಮಾಡಿರುವ ಗಗನನೌಕೆ 2014ರಲ್ಲಿ ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸಿ, ಪರಿಭ್ರಮಿಸುತ್ತಿದೆ.

ADVERTISEMENT

ಯುಎಇಯ ‘ಹೋಪ್‌’ , ಚೀನಾದ ‘ತಿಯಾನ್‌ವೆನ್‌–1’ ಎಂಬ ಗಗನನೌಕೆಗಳು ಮಂಗಳ ಗ್ರಹದ ಕಕ್ಷೆಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.