ವಾಷಿಂಗ್ಟನ್: 2024ಕ್ಕೆ ಮಾನವ ಸಹಿತ ಚಂದ್ರಯಾನಕ್ಕೆ ಸಿದ್ಧತೆ ಆರಂಭಿಸಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ( ನಾಸಾ), 2020 ಹಾಗೂ 2021ರಲ್ಲಿ ಚಂದ್ರನ ಮೇಲೆ ವೈಜ್ಞಾನಿಕ ಉಪಕರಣಗಳನ್ನು ಇಳಿಸಲು ಯೋಜನೆ ರೂಪಿಸಿದೆ.
ಅಪೋಲೊ ಯೋಜನೆಯಡಿ 1972ರಲ್ಲಿ ನಾಸಾ ಮೊದಲ ಮಾನವ ಸಹಿತ ಚಂದ್ರಯಾನವನ್ನು ಕೈಗೆತ್ತಿಕೊಂಡಿತ್ತು. ಇದಾದನಂತರ ಮತ್ತೊಮ್ಮೆ ಚಂದ್ರಯಾನದಯೋಜನೆಯನ್ನು ಕೈಗೆತ್ತಿಕೊಂಡಿದೆ.
ಆರ್ಟಿಮಿಸ್ ಹೆಸರಿನ ಈ ಯೋಜನೆಯಡಿಉಪಕರಣಗಳ ರವಾನೆಗೆ ಅಮೆರಿಕದ ಆ್ಯಸ್ಟ್ರೋಬಾಟಿಕ್, ಆರ್ಬಿಟ್ ಬಿಯಾಂಡ್ ಹಾಗೂ ಇಂಟ್ಯುಟಿವ್ ಮಶಿನ್ಸ್ ಸಂಸ್ಥೆಗಳನ್ನು ಪಾಲುದಾರರಾಗಿ ಆಯ್ದುಕೊಂಡಿದೆ.
ಉಡಾವಣೆ ನಿಗದಿ: ಆರ್ಬಿಟ್ ಬಿಯಾಂಡ್ ಸಂಸ್ಥೆ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಸೆಪ್ಟೆಂಬರ್ 2020ರಲ್ಲಿ ತನ್ನ ಗಗನನೌಕೆಯನ್ನು ಚಂದ್ರನ ಮೇಲಿನ ಜ್ವಾಲಾಮುಖಿಯ ಮಾರೇ ಇಂಬ್ರಿಯಂ ಕುಳಿಯಲ್ಲಿ ಇಳಿಸಲಿದೆ. 2021 ಜುಲೈ ವೇಳೆಗೆ ಸ್ಪೇಸ್ ಎಕ್ಸ್ ಸಹಕಾರದೊಂದಿಗೆಇಂಟ್ಯುಟಿವ್ ಮಶಿನ್ಸ್ ಸಂಸ್ಥೆ ಓಶಿಯಾನಸ್ ಪ್ರೊಸೆಲ್ಲರಂ ಪ್ರದೇಶದಲ್ಲಿ ಗಗನನೌಕೆ ಇಳಿಸಲಿದೆ. ಆ್ಯಸ್ಟ್ರೋಬಾಟಿಕ್ ಸಂಸ್ಥೆಯೂ 2021 ಜುಲೈನಲ್ಲಿ ಲ್ಯಾಕಸ್ ಮಾರ್ಟಿಸ್ ಕುಳಿಯಲ್ಲಿ ಗಗನನೌಕೆ ಇಳಿಸಲಿದೆ.
ಮಹಿಳಾ ಗಗನಯಾತ್ರಿ: ‘ಆರ್ಟಿಮಿಸ್ ಯೋಜನೆಯಡಿ ಮುಂದಿನ 5 ವರ್ಷದಲ್ಲಿ ಮೊದಲ ಮಹಿಳಾ ಗಗನಯಾತ್ರಿ ಹಾಗೂ ಮುಂದಿನ ಪುರುಷ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸುವುದು ನಮ್ಮ ಗುರಿಯಾಗಿದೆ’ ಎಂದು ನಾಸಾ ಆಡಳಿತಗಾರಜಿಮ್ ಬ್ರಿಂಡೆನ್‌ಸ್ಟ್ರೈನ್ ತಿಳಿಸಿದರು.
*
ಮುಂದಿನ ವರ್ಷ ನಾಸಾ ಚಂದ್ರನ ಮೇಲ್ಮೈ ಬಗ್ಗೆ ಹೆಚ್ಚಿನ ತಂತ್ರಜ್ಞಾನ ಸಂಶೋಧನೆಗೆ ಆದ್ಯತೆ ನೀಡಲಿದೆ.
-ಜಿಮ್ ಬ್ರಿಂಡೆನ್‌ಸ್ಟ್ರೈನ್, ನಾಸಾ ಆಡಳಿತಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.