ನವದೆಹಲಿ: ಮಂಗಳ ಗ್ರಹದಲ್ಲಿ ನಡೆದ ಸೂರ್ಯ ಗ್ರಹಣದ ವಿಡಿಯೊವೊಂದನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಬುಧವಾರ ಹಂಚಿಕೊಂಡಿದೆ.
ಮಂಗಳನ ಚಂದ್ರ (ನೈಸರ್ಗಿಕ ಉಪಗ್ರಹ) ಫೋಬೋಸ್ ಸೂರ್ಯನನ್ನು ಹಾದುಹೋಗುತ್ತಿರುವುದನ್ನುನಾಸಾದ ‘ಪರ್ಸೆವೆರೆನ್ಸ್ ರೋವರ್’ ಚಿತ್ರೀಕರಿಸಿ ಭೂಮಿಗೆ ರವಾನಿಸಿದೆ.
ಏಪ್ರಿಲ್ 2ರಂದು ಸಂಭವಿಸಿರುವ ಈ ಗ್ರಹಣ ಸರಿಸುಮಾರು 40 ಸೆಕೆಂಡ್‌ಗಳಲ್ಲಿ ಅಂತ್ಯಗೊಂಡಿದೆ.
ಫೋಬೋಸ್ ಉಪಗ್ರಹವು ಚಂದ್ರನಿಗಿಂತಲೂ ಸುಮಾರು 157 ಪಟ್ಟು ಚಿಕ್ಕದು. ಮಂಗಳ ಗ್ರಹ ಎರಡು ನೈಸರ್ಗಿಕ ಉಪಗ್ರಹಗಳನ್ನು ಹೊಂದಿದ್ದು, ಅದರಲ್ಲಿ ಫೋಬೋಸ್ ಕೂಡ ಒಂದು. ಡಿಮೋಸ್ ಎಂಬುದು ಮತ್ತೊಂದು ನೈಸರ್ಗಿಕ ಉಪಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.