ADVERTISEMENT

ಭೂಮಿ ಚಿತ್ರ ಸೆರೆಹಿಡಿದ ಪಾರ್ಕರ್ ನೌಕೆ

ಪಿಟಿಐ
Published 25 ಅಕ್ಟೋಬರ್ 2018, 17:29 IST
Last Updated 25 ಅಕ್ಟೋಬರ್ 2018, 17:29 IST

ವಾಷಿಂಗ್ಟನ್: ಸೂರ್ಯನ ಅಧ್ಯಯನಕ್ಕೆ ಉಡಾವಣೆ ಮಾಡಿರುವ ಮೊಟ್ಟಮೊದಲ ಪಾರ್ಕರ್ ಸೋಲಾರ್‌ ಪ್ರೋಬ್ ನೌಕೆಯು ಬಾಹ್ಯಾಕಾಶದಿಂದ ಭೂಮಿಯ ಚಿತ್ರ ಸೆರೆಹಿಡಿದಿದೆ.

ಸೆಪ್ಟೆಂಬರ್ 25ರಂದು ಭೂಮಿಯಿಂದ 2.7 ಕೋಟಿ ಮೈಲು ದೂರದಿಂದ ತೆಗೆಯಲಾದ ಈ ಚಿತ್ರದ ಬಲಭಾಗದಲ್ಲಿ ದುಂಡಗಿನ ಭೂಮಿ ಹೊಳೆಯುತ್ತಿರುವುದು ಕಾಣುತ್ತದೆ. ನೌಕೆಯಲ್ಲಿರುವ ವೈಡ್ ಫೀಲ್ಡ್ ಇಮೇಜರ್‌ (ಡಬ್ಲ್ಯೂಐಎಸ್‌ಪಿಆರ್) ಮೂಲಕ ಚಿತ್ರ ತೆಗೆಯಲಾಗಿದೆ. ಆಗಸ್ಟ್ 12ರಂದು ನೌಕೆ ಉಡಾವಣೆ ಮಾಡಲಾಗಿತ್ತು. ಏಳು ವರ್ಷಗಳ ಅವಧಿಯಲ್ಲಿ ಅದು ಗುರಿ ತಲುಪಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT