ADVERTISEMENT

ಇಸ್ರೇಲ್‌ ದಾಳಿ: ನಸ್ರಲ್‌ ಉತ್ತರಾಧಿಕಾರಿ ಹತ್ಯೆ?

ರಾಯಿಟರ್ಸ್
Published 5 ಅಕ್ಟೋಬರ್ 2024, 18:58 IST
Last Updated 5 ಅಕ್ಟೋಬರ್ 2024, 18:58 IST
-
-   

ಬೈರೂತ್‌/ಜೆರುಸಲೇಂ: ಇಸ್ರೇಲ್‌ ದಾಳಿಯಿಂದ ಹತರಾಗಿರುವ ಹಿಜ್ಬುಲ್ಲಾ ನಾಯಕ ಹಸನ್‌ ನಸ್ರಲ್ಲಾ ಅವರ ಸಂಭಾವ್ಯ ಉತ್ತರಾಧಿಕಾರಿ ಹಶೀಮ್‌ ಸಫೀದಿನ್‌ ಶುಕ್ರವಾರದಿಂದ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಲೆಬನಾನ್‌ ಭದ್ರತಾ ಮೂಲಗಳು ಶನಿವಾರ ತಿಳಿಸಿವೆ. ಇಸ್ರೇಲ್‌ ಪಡೆಗಳು ಸಫೀದಿನ್‌ ಅವರನ್ನೇ ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿವೆ ಎಂದು ವರದಿಯಾಗಿದೆ.  

ಬೈರೂತ್‌ನ ದಕ್ಷಿಣ ನಗರಗಳ ಮೇಲೆ ಇಸ್ರೇಲ್‌ ಗುರುವಾರ ತಡರಾತ್ರಿ ಸರಣಿ ವೈಮಾನಿಕ ದಾಳಿ ನಡೆಸಿದೆ. ಭೂಗತ ಬಂಕರ್‌ನಲ್ಲಿದ್ದ ಹಶೀಮ್‌ ಸಫೀದಿನ್‌ ಅವರನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಲಾಗಿದೆ ಎಂದು ಇಸ್ರೇಲ್‌ನ ಮೂವರು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಧ್ಯಮ ವರದಿ ಹೇಳಿದೆ. 

ಈ ದಾಳಿಯ ಬಳಿಕ ಸಫಿದ್ದೀನ್‌ ಕುರಿತು ಹಿಜ್ಬುಲ್ಲಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ನಸ್ರಲ್ಲಾ ಉತ್ತರಾಧಿಕಾರಿಯ ನಷ್ಟವು ಹಿಜ್ಬುಲ್ಲಾ ಮತ್ತು ಇರಾನ್‌ಗೆ ಆಘಾತ ತರಿಸಿದೆ ಎನ್ನಲಾಗಿದೆ.  

ADVERTISEMENT

ಹಿಜ್ಬುಲ್ಲಾದ ಗುಪ್ತಚರ ಪ್ರಧಾನ ಕಚೇರಿಯ ಮೇಲೂ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಲೆಫ್ಟಿನೆಂಟ್‌ ಕರ್ನಲ್‌ ನಡಾವ್‌ ಶೋಶಾನಿ ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.