ADVERTISEMENT

ಉಕ್ರೇನ್‌ಗೆ ಮಿಲಿಟರಿ ನೆರವು ಖಚಿತ, ಸದಸ್ಯತ್ವ ಸದ್ಯಕ್ಕಿಲ್ಲ‌: ನ್ಯಾಟೊ

ಎಪಿ
Published 12 ಜುಲೈ 2023, 13:48 IST
Last Updated 12 ಜುಲೈ 2023, 13:48 IST
ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ   

ವಿಲ್ನಿಯಸ್‌ (ಲಿಥುವೇನಿಯಾ): ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ ಹೆಚ್ಚಿನ ಮಿಲಿಟರಿ ನೆರವು ಒದಗಿಸಲು ಬದ್ಧವಾಗಿರುವುದಾಗಿ ನ್ಯಾಟೊ ರಾಷ್ಟ್ರಗಳು ಹೇಳಿವೆ. ಆದರೆ, ಸದಸ್ಯತ್ವದ ಬಗ್ಗೆ ಸ್ಪಷ್ಟವಾದ ಭರವಸೆ ನೀಡುವಲ್ಲಿ ವಿಫಲವಾಗಿವೆ.  

ರಷ್ಯಾ ಆಕ್ರಮಣದ ವಿರುದ್ಧ ಉಕ್ರೇನ್‌ಗೆ ನೆರವು ನೀಡುವ ಉದ್ದೇಶದಿಂದಲೇ ನ್ಯಾಟೊ–ಉಕ್ರೇನ್‌ ಮಂಡಳಿಯನ್ನು ಹೊಸದಾಗಿ ರಚಿಸಲಾಗಿದ್ದು, 31 ಮಿತ್ರರಾಷ್ಟ್ರಗಳು ಮತ್ತು ಉಕ್ರೇನ್ ಅನ್ನು ಈ ಮಂಡಳಿ ಒಳಗೊಂಡಿದೆ. ಈ ಮಂಡಳಿಯಲ್ಲಿ ತುರ್ತು ಸಮಾಲೋಚನೆಗಳನ್ನು ನಡೆಸಲು ಅವಕಾಶವಿರಲಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ನ್ಯಾಟೊ ರಾಷ್ಟ್ರಗಳ ನಾಯಕರು ಮಂಡಳಿಯಲ್ಲಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಜತೆ ಚರ್ಚಿಸಲಿದ್ದಾರೆ.  

ADVERTISEMENT

ಉಕ್ರೇನ್ ಅನ್ನು ನ್ಯಾಟೊಗೆ ಸೇರಿಸಿಕೊಳ್ಳದೇ ಇದ್ದರೂ, ಅದನ್ನು ಮಿಲಿಟರಿ ಮೈತ್ರಿಗೆ ಹತ್ತಿರ ತರುವುದು ನ್ಯಾಟೊ–ಉಕ್ರೇನ್‌ ಮಂಡಳಿ ರಚನೆಯ ಉದ್ದೇಶವಾಗಿದೆ

’ಮಿತ್ರರಾಷ್ಟ್ರಗಳು ಅಂಗೀಕರಿಸಿದರೆ ಮತ್ತು ಷರತ್ತುಗಳನ್ನು ಒಪ್ಪಿಕೊಂಡರೆ ಉಕ್ರೇನ್ ಅನ್ನು ನ್ಯಾಟೊಗೆ ಸೇರಿಸಿಕೊಳ್ಳಬಹುದು’ ಎಂದು ಮಂಗಳವಾರ ನಡೆದಿದ್ದ ನ್ಯಾಟೊ ಶೃಂಗ ಸಭೆಯ ಬಳಿಕ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ತಿಳಿಸಲಾಗಿತ್ತು.   

ನ್ಯಾಟೊ ರಾಷ್ಟ್ರಗಳ ಮಿಲಿಟರಿ ನೆರವಿನ ಬಗ್ಗೆ ಝೆಲೆನ್‌ಸ್ಕಿ ಮೆಚ್ಚುಗೆ ವ್ಯಕ್ತಪಡಿಸಿದ್ದರೂ, ಸದಸ್ಯತ್ವ ನೀಡದೇ ಇರುವುದು ಅವರಿಗೆ ನಿರಾಶೆ ಮೂಡಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.