ನವದೆಹಲಿ: ಭೂಕಂಪ ಪೀಡಿತ ಟರ್ಕಿ ಹಾಗೂ ಸಿರಿಯಾಗೆ ಈಗಾಗಲೇ ಭಾರತದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ನುರಿತ ರಕ್ಷಣಾ ತಂಡದೊಂದಿಗೆ ಶ್ವಾನದಳವನ್ನು ರವಾನಿಸಲಾಗಿದೆ.
ಈಗ ಆರು ವರ್ಷದ ಬಾಲಕಿಯನ್ನು ರಕ್ಷಿಸಲು ಎನ್‌ಡಿಆರ್‌ಎಫ್‌ನ ಶ್ವಾನದಳ ನೆರವಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ' ಟ್ವೀಟ್ ಮಾಡಿದೆ.
ಇದನ್ನೂ ಓದಿ: ಟರ್ಕಿ ಭೂಕಂಪ 2.6 ಕೋಟಿ ಜನ ಅತಂತ್ರ, ನೆರವಿನ ನಿರೀಕ್ಷೆ
ಭೂಕಂಪದಿಂದ ಹಾನಿಗೊಳಗಾದ ಪ್ರದೇಶವು ಕಟ್ಟಡದ ಅವಶೇಷಗಳಿಂದ ತುಂಬಿಕೊಂಡಿದೆ. ಯಂತ್ರೋಪಕರಣಗಳು ವೈಫಲ್ಯ ಕಂಡ ಜಾಗದಲ್ಲಿ ರೊಮಿಯೋ ಮತ್ತು ಜೂಲಿ ಎಂಬ ಶ್ವಾನ ಜೋಡಿ ಮೂಸುತ್ತಾ ಅವಶೇಷಗಳಡಿಯಲ್ಲಿ ಬಾಲಕಿ ಇರುವುದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಟರ್ಕಿಯಲ್ಲಿ ಫೆಬ್ರುವರಿ 6ರಂದು ಪ್ರಬಲ ಭೂಕಂಪ ಸಂಭವಿಸಿತ್ತು. ಈಗ ಭೂಕಂಪ ಸಂಭವಿಸಿ ಒಂದು ವಾರ ಕಳೆದರೂ ಹಾನಿಗೊಳಗಾದ ಪ್ರದೇಶಗಳಲ್ಲಿ ಬದುಕುಳಿದವರನ್ನು ಹುಡುಕಲು ಎನ್‌ಡಿಆರ್‌ಎಫ್ ತಂಡ ಕಠಿಣ ಪ್ರಯತ್ನವನ್ನು ಮುಂದುವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.