ಮೆಕ್ಕಾ: ’ಹಜ್ ಯಾತ್ರೆ ಹಿನ್ನೆಲೆಯಲ್ಲಿ ಇದುವರೆಗೆ 15 ಲಕ್ಷ ವಿದೇಶಿ ಯಾತ್ರಿಕರು ಸೌದಿ ಅರೇಬಿಯಾಗೆ ಬಂದಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ 2020ರಿಂದ ಹಜ್ ಯಾತ್ರೆಗೆ ಕೆಲವು ನಿರ್ಬಂಧ ವಿಧಿಸಲಾಗಿತ್ತು. ಆದರೆ, ಈ ಬಾರಿ ಯಾವುದೇ ನಿರ್ಬಂಧಗಳಿಲ್ಲದೇ ಹಜ್ ಯಾತ್ರೆ ನಡೆಯಲಿದೆ. ಸೋಮವಾರದಿಂದ ಯಾತ್ರೆ ಆರಂಭವಾಗಲಿದ್ದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದೆ.
‘ಕೋವಿಡ್‌ಗೂ ಮುಂಚೆ ಬರುತ್ತಿದ್ದ ಸಂಖ್ಯೆಯಷ್ಟು ಭಕ್ತರು ಈ ವರ್ಷ ಬರುವ ನಿರೀಕ್ಷೆಯಿದೆ. 2019ರಲ್ಲಿ 24 ಲಕ್ಷ ಮಂದಿ ಮುಸಲ್ಮಾನರು ಹಜ್ ಯಾತ್ರೆಗೆ ಬಂದಿದ್ದರು’ ಎಂದು ಅಧಿಕಾರಿಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.