ADVERTISEMENT

ನೇಪಾಳದಲ್ಲಿ ಭಾರಿ ಮಳೆ: ಸಾವಿನ ಸಂಖ್ಯೆ 200ಕ್ಕೆ ಏರಿಕೆ

ಕಠ್ಮಂಡು ಸಂಪರ್ಕಿಸುವ ಬಹುತೇಕ ಮಾರ್ಗಗಳು ಬಂದ್ | ಈವರೆಗೆ 4,500 ಮಂದಿ ರಕ್ಷಣೆ

ಪಿಟಿಐ
Published 30 ಸೆಪ್ಟೆಂಬರ್ 2024, 14:22 IST
Last Updated 30 ಸೆಪ್ಟೆಂಬರ್ 2024, 14:22 IST
ನೇಪಾಳದ ಕಠ್ಮಂಡುವಿನ ಬಾಗ್‌ಮತಿ ನದಿಯ ತಟದಲ್ಲಿ ಇರುವ ಟಿನ್ ಶೆಡ್ ಒಂದು ಪ್ರವಾಹದಲ್ಲಿ ಅರ್ಧದಷ್ಟು ಮುಳುಗಿತ್ತು –ಪಿಟಿಐ ಚಿತ್ರ
ನೇಪಾಳದ ಕಠ್ಮಂಡುವಿನ ಬಾಗ್‌ಮತಿ ನದಿಯ ತಟದಲ್ಲಿ ಇರುವ ಟಿನ್ ಶೆಡ್ ಒಂದು ಪ್ರವಾಹದಲ್ಲಿ ಅರ್ಧದಷ್ಟು ಮುಳುಗಿತ್ತು –ಪಿಟಿಐ ಚಿತ್ರ   

ಕಠ್ಮಂಡು: ನೇಪಾಳದಾದ್ಯಂತ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ ಸುಮಾರು 200ಕ್ಕೆ ಏರಿಕೆಯಾಗಿದೆ. ಕನಿಷ್ಠ 30 ಮಂದಿ ಇನ್ನೂ ನಾಪತ್ತೆಯಾಗಿದ್ದು, ಮೂರನೇ ದಿನ ಸೋಮವಾರವೂ ರಕ್ಷಣಾ ಕಾರ್ಯಾಚರಣೆ ನಡೆಯಿತು.

ಭಾರಿ ಮಳೆ, ಪ್ರವಾಹ, ಭೂಕುಸಿತದ ಪರಿಣಾಮವಾಗಿ ಕನಿಷ್ಠ 192 ಮಂದಿ ಮೃತಪಟ್ಟಿದ್ದಾರೆ. 194 ಮಂದಿ ಗಾಯಗೊಂಡಿದ್ದಾರೆ ಎಂದು ಗೃಹ ಇಲಾಖೆ ವಕ್ತಾರ ರಿಷಿರಾಮ್ ತಿವಾರಿ ತಿಳಿಸಿದರು.

ಪ್ರಧಾನಿ ಪ್ರಕಾಶ್ ಮಾನ್‌ ಸಿಂಗ್‌ ಅವರು ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ಭಾನುವಾರ ಸರ್ವಪಕ್ಷಗಳ ಸಭೆ ಕರೆದಿದ್ದು, ರಕ್ಷಣೆ, ಪರಿಹಾರ ಮತ್ತು ಪುನರ್‌ವಸತಿ ಕಾರ್ಯಾಚರಣೆ ಮುಂದುವರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ADVERTISEMENT

ನೇಪಾಳ ಸೇನೆ, ನೇಪಾಳ ಪೊಲೀಸ್ ಮತ್ತು ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ ಈವರೆಗೆ 4,500 ಮಂದಿಯನ್ನು ರಕ್ಷಿಸಿದ್ದಾರೆ.

ನೈಸರ್ಗಿಕ ವಿಪತ್ತು ಸಂಭವಿಸಿದ ನಂತರ ನೂರಾರು ಜನರು ಆಹಾರ ಮತ್ತು ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಭೂಕುಸಿತದಿಂದಾಗಿ ಪ್ರಮುಖ ಹೆದ್ದಾರಿಗಳು ಬಂದ್‌ ಆಗಿವೆ. ಹೀಗಾಗಿ ಭಾರತ ಹಾಗೂ ದೇಶದ ಮತ್ತಿತರ ಜಿಲ್ಲೆಗಳಿಂದ ಪೂರೈಕೆಯಾಗುತ್ತಿದ್ದ ತರಕಾರಿಗಳ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ ತರಕಾರಿಗಳ ಬೆಲೆ ಗಗನಮುಖಿಯಾಗಿದೆ.

ದೇಶದ ಹಲವು ಹೆದ್ದಾರಿಗಳು ಹಾಳಾಗಿದ್ದು, ರಾಜಧಾನಿ ಕಠ್ಮಂಡುವನ್ನು ತಲುಪುವ ಬಹುತೇಕ ಎಲ್ಲ ಮಾರ್ಗಗಳು ಇನ್ನೂ ಬಂದ್‌ ಆಗಿವೆ. ಹೀಗಾಗಿ ಸಾವಿರಾರು ಪ್ರಯಾಣಿಕರು ಅತಂತ್ರರಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.