ADVERTISEMENT

‘ಬಾವಲಿಯಲ್ಲಿ ‘ನಿಯೊಕೋವ್’ ಕೊರೊನಾ ವೈರಸ್‌ ಪತ್ತೆ’

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 19:32 IST
Last Updated 28 ಜನವರಿ 2022, 19:32 IST

ಬೀಜಿಂಗ್‌: ಕೊರೊನಾ ವೈರಸ್‌ ಕುಟುಂಬಕ್ಕೆ ಸೇರಿದ ‘ನಿಯೊಕೋವ್‌’ ಎಂಬ ವೈರಸ್ಅನ್ನು ದಕ್ಷಿಣ ಆಫ್ರಿಕಾದ ಬಾವಲಿಗಳಲ್ಲಿ ಪತ್ತೆ ಹಚ್ಚಿದ್ದಾಗಿ ಚೀನಾ ಸಂಶೋಧಕರು ಹೇಳಿದ್ದಾರೆ.

‘ಈ ವೈರಸ್‌ ರೂಪಾಂತರಗೊಂಡಿದ್ದೇ ಆದಲ್ಲಿ ಮುಂಬರುವ ದಿನಗಳಲ್ಲಿ ಮನುಷ್ಯರಿಗೆ ಅಪಾಯವೊಡ್ಡಲಿದೆ’ ಎಂದೂ ಅವರು ಎಚ್ಚರಿಸಿದ್ದಾರೆ.

‘ಮಿಡಲ್‌ ಈಸ್ಟ್‌ ರೆಸ್ಪಿರೇಟರಿ ಸಿಂಡ್ರೋಮ್‌’ (ಎಂಇಆರ್‌ಎಸ್‌) ಎಂಬ ಉಸಿರಾಟ ತೊಂದರೆ ಕಾಯಿಲೆಗೆ ಕಾರಣವಾಗುವ ವೈರಸ್‌ಗೆ ಇರುವಂತಹ ಗುಣಲಕ್ಷಣಗಳನ್ನೇ ’ನಿಯೊಕೋವ್‌’ ವೈರಾಣು ಹೊಂದಿದೆ ಎಂದಿರುವ ಸಂಶೋಧಕರು, ಈ ವೈರಸ್‌ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯ ಇದೆ ಎಂದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದೇ ಅಭಿಪ್ರಾಯವನ್ನುವ್ಯಕ್ತಪಡಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.