ಕಠ್ಮಂಡು: ನಾಲ್ವರು ಭಾರತೀಯರ ಸಹಿತ 22 ಮಂದಿ ಪ್ರಯಾಣಿಸುತ್ತಿದ್ದ ನೇಪಾಳದ ಲಘು ವಿಮಾನವೊಂದು ಸಂಪರ್ಕ ಕಳೆದುಕೊಂಡು ಭಾನುವಾರ ನಾಪತ್ತೆಯಾಗಿದೆ.
ತಾರಾ ಏರ್ ಸಂಸ್ಥೆಯ 9 ಎನ್‌ಎಇಟಿಮಾದರಿಯ ಎರಡು ಎಂಜಿನ್‌ನ ವಿಮಾನವು ಪೊಖ್ರಾದಿಂದ ಜೊಮ್‌ಸೊಮ್‌ಗೆ ಹೊರಟಿತ್ತು. ಬೆಳಿಗ್ಗೆ 9.55ರ ಸುಮಾರಿಗೆ ವಿಮಾನವು ನಿಯಂತ್ರಣ ಕಚೇರಿಯೊಂದಿಗೆ ಸಂಪರ್ಕ ಕಳೆದುಕೊಂಡಿತು ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ನಾಪತ್ತೆಯಾಗಿರುವ ವಿಮಾನದ ಹುಡುಕಾಟಕ್ಕಾಗಿ ಎರಡು ಸೇನಾ ಹೆಲಿಕಾಪ್ಟರ್‌ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ನೇಪಾಳ ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.