ADVERTISEMENT

ನೇಪಾಳ: ನೂತನ ಪ್ರಧಾನಿ ಓಲಿ ಇಂದು ವಿಶ್ವಾಸಮತ ಯಾಚನೆ

ಪಿಟಿಐ
Published 21 ಜುಲೈ 2024, 0:30 IST
Last Updated 21 ಜುಲೈ 2024, 0:30 IST
ಕೆ.ಪಿ. ಶರ್ಮ ಓಲಿ
ಕೆ.ಪಿ. ಶರ್ಮ ಓಲಿ   

ಕಠ್ಮಂಡು: ನೇಪಾಳದ ನೂತನ ಪ್ರಧಾನಿ ಕೆ.ಪಿ.ಶರ್ಮ ಓಲಿ ಅವರು ಭಾನುವಾರ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ.

ಕಮ್ಯುನಿಷ್ಟ್‌ ಪಾರ್ಟಿ ಆಫ್‌ ನೇಪಾಳ– ಯುನಿಫೈಡ್‌ ಮಾರ್ಕ್ಸಿಸ್ಟ್‌ ಲೆನಿನಿಸ್ಟ್(ಸಿಪಿಎನ್‌–ಯುಎಮ್‌ಎಲ್‌) ಮತ್ತು ನೇಪಾಳಿ ಕಾಂಗ್ರೆಸ್‌ ಪಕ್ಷಗಳ ಸಮ್ಮಿಶ್ರ ಸರ್ಕಾರದ ನಾಯಕನಾಗಿ ಓಲಿ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದರು. ನೇಪಾಳದ ಸಂವಿಧಾನದ ಪ್ರಕಾರ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದವರು 30 ದಿನಗಳ ಒಳಗಾಗಿ ವಿಶ್ವಾಸಮತ ಸಾಬೀತು ಪಡಿಸಬೇಕು.

275 ಸದಸ್ಯರನ್ನು ಹೊಂದಿರುವ ನೇಪಾಳ ಸಂಸತ್ತಿನಲ್ಲಿ ಸರ್ಕಾರ ರಚನೆಗೆ ಕನಿಷ್ಠ 138 ಸದಸ್ಯರ ಬೆಂಬಲ ಅಗತ್ಯವಿದೆ. ಸಿಪಿಎನ್‌ –ಯುಎಮ್‌ಎಲ್‌ ಮತ್ತು ಎನ್‌ಸಿ ಪಕ್ಷಗಳು 167 ಸದಸ್ಯಬಲವನ್ನು ಹೊಂದಿದ್ದು, ಇತರ ಎರಡು ಪಕ್ಷಗಳ ಬೆಂಬಲವು ಈ ಸಮ್ಮಿಶ್ರ ಸರ್ಕಾರಕ್ಕಿದೆ. ಹಾಗಾಗಿ ಒಟ್ಟು 178 ಸದಸ್ಯರ ‌ಬೆಂಬಲ ಖಚಿತವಾಗಿದೆ. ಇದರೊಂದಿಗೆ ಇತರ ಕೆಲ ಪಕ್ಷಗಳು ಓಲಿ ಪರವಾಗಿ ಮತ ನೀಡುವ ಸಾಧ್ಯತೆಗಳಿದೆ ಎಂದು ಸಿಪಿಎನ್‌ –ಯುಎಮ್‌ಎಲ್‌ನ ಆಪ್ತಮೂಲಗಳು ತಿಳಿಸಿವೆ.

ADVERTISEMENT

ಈ ಹಿಂದೆ ಪ್ರಧಾನಿಯಾಗಿದ್ದ ಪುಷ್ಪಕಮಲ್ ದಹಲ್ ಪ್ರಚಂಡ ಅವರು ಕಳೆದ ವಾರ ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾದ ಬಳಿಕ, ಸಿಪಿಎನ್‌ –ಯುಎಮ್‌ಎಲ್‌ ಮತ್ತು ಎನ್‌ಸಿ ಪಕ್ಷಗಳು ಸಮ್ಮಿಶ್ರ ಸರ್ಕಾರ ರಚಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.